ಸಿದ್ದಾಪುರ, ಜು. 23: ಹೆಚ್ 1ಎನ್1 ಸೋಂಕಿಗೆ ತುತ್ತಾಗಿ ಇತ್ತೀಚೆಗೆ ಮೃತಪಟ್ಟಿದ್ದ ಹಳೆ ಸಿದ್ದಾಪುರದ ಹೈಸ್ಕೂಲ್ ಪೈಸಾರಿಯ ರಾಜು ಅವರ ಮನೆ ಹಾಗೂ ಅವರ ಅಕ್ಕಪಕ್ಕದ ಮನೆಗಳಿಗೆ ಮಡಿಕೇರಿಯ ವೈದ್ಯಾಧಿಕಾರಿ ಮಂಜುನಾಥ್ ಮತ್ತು ಸಿಬ್ಬಂದಿ ನೀಡಿ; ಸೋಂಕು ಹರಡದಂತೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಸಣ್ಣ ಮಕ್ಕಳು, ಮಧುಮೇಹಿಗಳು ಸೇರಿದಂತೆ 50 ವರ್ಷ ಮೇಲ್ಪಟ್ಟವರು ಎಚ್ಚರದಿಂದಿರಬೇಕು. ಹಲವು ದಿನದಿಂದಿರುವ ಕೆಮ್ಮು, ಶೀತ ,ಜ್ವರ, ಮೈ ಕೈ ನೋವು ಮುಂತಾದ ಅನಾರೋಗ್ಯವಿರುವವರು ಕೂಡಲೇ ಸಮುದಾಯ ಆರೋಗ್ಯ ಕೇಂದ್ರಕ್ಕೆ ತೆರಳಿ ಚಿಕಿತ್ಸೆ ಪಡೆಯಬೇಕು.

ಹೆಚ್1ಎನ್1 ಸೋಂಕಿನ ಬಗ್ಗೆ ಸಂಶಯ ಕಂಡು ಬಂದರೆ ವೈದ್ಯರು ಈ ಬಗ್ಗೆ ತಪಾಸಣೆ ಮಾಡಿ ರಕ್ತ ಹಾಗೂ ಕಫ ಪರೀಕ್ಷೆ ನಡೆಸುತ್ತಾರೆ ಯಾರು ಕೂಡ ಆತಂಕ ಪಡುವ ಅಗತ್ಯವಿಲ್ಲವೆಂದರು. ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ರಮೇಶ್, ಕಿರಿಯ ಪುರುಷ ಆರೋಗ್ಯ ನಿರೀಕ್ಷಕ ಸುದರ್ಶನ್, ಜಿಲ್ಲಾ ನರ್ಸಿಂಗ್ ಅಧಿಕಾರಿ ಸುಶೀಲ, ಕಿರಿಯ ಮಹಿಳಾ ಆರೋಗ್ಯ ಅಧಿಕಾರಿ ಶಾರದಾ ಮೊದಲಾದವರು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ನಿವಾಸಿಗಳಿಗೆ ಮಾಹಿತಿ ನೀಡಿದರು.