ಸಿದ್ದಾಪುರ, ಜು. 22: ಮನೆಯ ಅಂಗಳದಲ್ಲಿ ಕಾಡಾನೆಗಳು ದಾಂಧಲೆ ನಡೆಸಿ, ಹೂಕುಂಡಗಳನ್ನು ಹಾನಿ ಮಾಡಿದ್ದು, ಮನೆಯ ಮಾಲೀಕರು ಭಯಬೀತರಾಗಿದ್ದಾರೆ.
ಸಿದ್ದಾಪುರದ ಪಾಂಡಂಡ ಪ್ರತಾಪ್ ಮುತ್ತಣ್ಣ ಎಂಬವರ ಮನೆಯ ಅಂಗಳದಲ್ಲಿ ಭಾನುವಾರ ರಾತ್ರಿ ಕಾಡಾನೆ ಹಿಂಡು ದಾಂಧಲೆ ನಡೆಸಿ, ಮನೆಯ ಸುತ್ತಲೂ ಇಟ್ಟಿದ್ದ ಹೂಕುಂಡ ಹಾಗೂ ಹಣ್ಣಿನ ಗಿಡಗಳನ್ನು ಧ್ವಂಸಗೊಳಿಸಿವೆ. ಮನೆಯ ಗೋಡೆ ಬಳಿಯಲ್ಲಿ ಕಾಡಾನೆಗಳ ಹಿಂಡು ಘೀಳಿಡುತ್ತಾ, ಕಾಫಿ ಗಿಡಗಳನ್ನು ನಾಶಗೊಳಿಸಿವೆ. ಕಾಡಾನೆ ಹಾವಳಿಯಿಂದ ಕಾರ್ಮಿಕರು ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದು, ಸ್ಥಳೀಯರು ಭಯಬೀತರಾಗಿದ್ದಾರೆ.