ಗೋಣಿಕೊಪ್ಪ ವರದಿ, ಜು. 21: ಕಳೆದ ವರ್ಷದ ಪ್ರವಾಹದಲ್ಲಿ ಮನೆಕಳೆದುಕೊಂಡು ಇಲ್ಲಿನ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗಕ್ಕೆ ದಾಖಲಾಗಿರುವ ಶಿರಂಗಳ್ಳಿ ಗ್ರಾಮದ ವಿದ್ಯಾರ್ಥಿನಿ ಯು.ಎಂ. ಐಶ್ವರ್ಯ ಅವರ ವ್ಯಾಸಂಗಕ್ಕೆ ಧನ ಸಹಾಯ ನೀಡಲಾಯಿತು.
ಕಾಲೇಜು ಶುಲ್ಕ ಹಾಗೂ ವಿದ್ಯಾರ್ಥಿನಿಲಯದ ಶುಲ್ಕವನ್ನು ಕೋಣನಕಟ್ಟೆ ಗ್ರಾಮದ ಕಲ್ಚರಲ್ ಅಂಡ್ ರಿಕ್ರಿಯೇಷನ್ ಅಸೋಸಿಯೇಷನ್ ಮತ್ತು ವಿಲೇಜ್ ಡೆವಲಪ್‍ಮೆಂಟ್ ಫಂಡ್ ಪದಾಧಿಕಾರಿಗಳು ಪ್ರಾಂಶುಪಾಲ ಸಣ್ಣುವಂಡ ಎಸ್. ಮಾದಯ್ಯ ಅವರಿಗೆ ಚೆಕ್ ಮೂಲಕ ಹಸ್ತಾಂತರಿಸಿದರು.
ಈ ಸಂದರ್ಭ ಕಲ್ಚರಲ್ ಅಂಡ್ ರಿಕ್ರಿಯೇಷನ್ ಅಸೋಸಿಯೇಷನ್ ಅಧ್ಯಕ್ಷ ಅಜ್ಜಿನಿಕಂಡ ಬಿ. ತಮ್ಮಯ್ಯ, ಕಾರ್ಯದರ್ಶಿ ಪಾರುವಂಗಡ ಜಿ ಅಪ್ಪಚ್ಚು, ನಿರ್ದೇಶಕರಾದ ಪುಚ್ಚಿಮಾಡ ಟಿ. ಸುಬ್ಬಯ್ಯ, ಪುಚಿಮಾಡ ಟಿ. ಅಪ್ಪಚ್ಚು, ಪುಚ್ಚಿಮಾಡ ಬಿ. ಕಿಶೋರ್ ಬೋಪಯ್ಯ, ಚಕ್ಕೆರ ಮಧು ಕುಶಾಲಪ್ಪ, ಕಾವೇರಿ ಕಾಲೇಜು ಹಳೇ ವಿದ್ಯಾರ್ಥಿ ಸಂಘದ ಸಂಚಾಲಕಿ ಎಸ್.ಎಂ. ರಜನಿ ಉಪಸ್ಥಿತರಿದ್ದರು.