ಕಳೆದ 24 ಗಂಟೆಗಳಲ್ಲಿ ಜೀವನದಿ ಕಾವೇರಿಯ ಉಗಮ ಸ್ಥಳ ತಲಕಾವೇರಿ ವ್ಯಾಪ್ತಿಯಲ್ಲಿ ಸರಾಸರಿ 6 ಇಂಚು ಮಳೆ ದಾಖಲಾಗಿದೆ. ಅಲ್ಲದೆ ಭಾಗಮಂಡಲ ವ್ಯಾಪ್ತಿಯಲ್ಲಿ 2.93 ಇಂಚು ಹಾಗೂ ಸಂಪಾಜೆ ವ್ಯಾಪ್ತಿಯಲ್ಲಿ 3.46 ಇಂಚು ಮಳೆಯಾಗಿದ್ದು; ಕಳೆದ ರಾತ್ರಿಯಿಡೀ ಮಳೆ ಸುರಿದಿತ್ತು.

ಕಳೆದ 24 ಗಂಟೆಗಳಲ್ಲಿ ಜಿಲ್ಲೆಗೆ ಸರಾಸರಿ 1 ಇಂಚು ಮಳೆಯಾಗಿದೆ. ಜನವರಿಯಿಂದ ಈ ತನಕ 29.87 ಇಂಚು ದಾಖಲಾಗಿದೆ. ಕಳೆದ ವರ್ಷ ಈ ಅವಧಿಗೆ 90.90 ಇಂಚು ದಾಖಲಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಹಿಂದಿನ 24 ಗಂಟೆಗಳಲ್ಲಿ 2.06 ಇಂಚು, ಸೋಮವಾರಪೇಟೆ ತಾಲೂಕಿನಲ್ಲಿ 0.35 ಇಂಚು, ವೀರಾಜಪೇಟೆ ತಾಲೂಕಿನಲ್ಲಿ 0.46 ಇಂಚು ಮಳೆಯಾಗಿದೆ.

ಕುಟ್ಟ, ಶ್ರೀಮಂಗಲ, ಹುದಿಕೇರಿ, ಪೊನ್ನಂಪೇಟೆ, ಬಿರುನಾಣಿ, ಬಾಳೆಲೆ, ಕಾನೂರು, ನಿಟ್ಟೂರು, ಗೋಣಿಕೊಪ್ಪ ಸಹಿತ ಅಲ್ಪ ಮಳೆಯಾಗಿದೆ. ಉತ್ತರ ಕೊಡಗಿನ ಶಾಂತಳ್ಳಿ ಹಾಗೂ ಇತರೆಡೆ ಕೂಡ ಸ್ವಲ್ಪ ಮಳೆಯಾಗಿದೆ. ಇಂದು ಮಡಿಕೇರಿ, ಮದೆ, ಸಂಪಾಜೆ, ಗಾಳಿಬೀಡು ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಿದೆ. ಜಿಲ್ಲೆಯಲ್ಲಿ ಸಣ್ಣಪುಟ್ಟ ಘಟನೆಗಳ ಹೊರತು ಯಾವದೇ ಅಪಾಯ ಎದುರಾಗಿಲ್ಲವೆಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಎಸ್‍ಪಿ ಡಾ. ಸುಮನ್ ಅವರುಗಳು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದಾರೆ.