ವೀರಾಜಪೇಟೆ, ಜು. 21: ವೀರಾಜಪೇಟೆ ವಿಭಾಗದಲ್ಲಿ ನಿನ್ನೆ ರಾತ್ರಿ ಸುರಿದ ಮಳೆಗೆ ಇಲ್ಲಿನ ಅಯ್ಯಪ್ಪ ಬೆಟ್ಟದ ಮೇಲೆ ದಿನೇಶ್ ಎಂಬವರಿಗೆ ಸೇರಿದ ತಡೆಗೋಡೆ ಕುಸಿದು ಬಿದ್ದುದರಿಂದ ಪುಷ್ಟರಾಜ್ ಎಂಬವರ ಮನೆ ಜಖಂಗೊಂಡಿದೆ.
ಅಯ್ಯಪ್ಪ ಬೆಟ್ಟದಲ್ಲಿ ತಡೆಗೋಡೆ ಕುಸಿದ ಸ್ಥಳಕ್ಕೆ ಇಲ್ಲಿನ ಪಟ್ಟಣ ಪಂಚಾಯಿತಿಯ ರೆವಿನ್ಯೂ ಇನ್ಸ್‍ಪೆಕ್ಟರ್ ಸೋಮೇಶ್ ಹಾಗೂ ವಾರ್ಡ್ ಸದಸ್ಯರಾದ ಡಿ.ಪಿ.ರಾಜೇಶ್ ಭೇಟಿ ನೀಡಿ ಪರಿಶೀಲಿಸಿದರು. ತಡೆಗೋಡೆ ಕುಸಿತ ಹಾಗೂ ಮನೆ ಜಖಂಗೊಂಡು ಸುಮಾರು ರೂ ಒಂದೂವರೆ ಲಕ್ಷಕ್ಕೂ ಅಧಿಕ ನಷ್ಟವಾಗಿದೆ. ಪುಷ್ಟರಾಜು ಕುಟುಂಬವನ್ನು ಸ್ಥಳಾಂತರಿಸಲು ಪಟ್ಟಣ ಪಂಚಾಯಿತಿ ಕ್ರಮಕೈಗೊಂಡಿದೆ. ಬೇತ್ರಿ ಹಾಗೂ ಕದನೂರುವಿನ ಕಾವೇರಿ ಹೊಳೆಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.