ಗುಡ್ಡೆಹೊಸೂರು, ಜು. 21: ವಿವೇಕಾನಂದ ಯೂತ್ ಮೂವ್‍ಮೆಂಟ್ ಕೊಡಗು ಶಾಖೆ ವತಿಯಿಂದ ಗುಡ್ಡೆಹೊಸೂರು ಗ್ರಾಮದಲ್ಲಿ ಸಮುದಾಯ ತಪಾಸಣಾ ಕಾರ್ಯಕ್ರಮ ನಡೆಸಲಾಯಿತು. ಗಂಟಲು, ಕಿವಿ ಮೂಗು ಮತ್ತು ದೈಹಿಕ ಪರೀಕ್ಷೆಗಳನ್ನು ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಸುಮಾರು 50 ಮಂದಿ ಭಾಗವಹಿಸಿದ್ದರು. ಯೋಜನಾ ಸಹಾಯಕಿ ಸುನಿತಾ, ಎಸ್. ಬೈರಪ್ಪ, ಗುಡ್ಡೆಹೊಸೂರು ಶಾಲೆಯ ಮುಖ್ಯ ಶಿಕ್ಷಕ ಸಣ್ಣಸ್ವಾಮಿ, ಶುಭಾ, ನಾಗೇಂದ್ರ, ಮಾನಸ ಹಾಗೂ ಹೇಮಲತಾ ಮುಂತಾದವರು ಇದ್ದರು.