ಶನಿವಾರಸಂತೆ, ಜು. 21: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‍ದಾರರಿಗೆ ಹೆಲ್ತ್ ಕಾರ್ಡ್ ಮಾಡಿಸುವಾಗ ಅಲ್ಲಿನ ಸಿಬ್ಬಂದಿ ಅಧಿಕ ಹಣ ವಸೂಲಿ ಮಾಡುತ್ತಿರುವದಾಗಿ ಸಾರ್ವಜನಿಕರು ವಿರೋಧ ವ್ಯಕ್ತಪಡಿಸಿದ್ದಾರೆ. ರೇಶನ್ ಕಾರ್ಡ್‍ದಾರರಿಗೆ ಅರ್ಜಿ ಫಾರಂಗೆ ಮಾಹಿತಿ ಸಲ್ಲಿಸುವಾಗ ಒಂದು ಅರ್ಜಿಗೆ ರೂ. 10 ಸ್ವೀಕರಿಸಬೇಕಾಗಿದ್ದರೂ ಸಿಬ್ಬಂದಿ ರೂ. 25 ವಸೂಲಿ ಮಾಡುತ್ತಿದ್ದಾರೆ ಎಂದು ರಾಜೇಂದ್ರ, ಸುಧೀರ್, ಸುನೀತಾ, ರೇವತಿ, ರಾಜು ಇತರರು ದೂರಿದ್ದಾರೆ.