ಮಡಿಕೇರಿ, ಜು. 21: ಎಲ್ಪಿಜಿ ಸಿಲಿಂಡರ್ಗಳನ್ನು ಗ್ರಾಹಕರಿಗೆ ಡೋರ್ ಡೆಲಿವರಿ ನೀಡುವ ಸಂದರ್ಭ ಗ್ರಾಹಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಬರುತ್ತಿವೆ. ಸಿಲಿಂಡರ್ ಗಳನ್ನು ಡೋರ್ ಡೆಲಿವರಿ ನೀಡುವ ಕುರಿತು ಸರ್ಕಾರದ ಆದೇಶದಲ್ಲಿ ನಿಗದಿಪಡಿಸಿರುವ ದರಗಳ ಪ್ರಕಾರ ಗ್ರಾಹಕರಿಂದ ಹಣ ಪಡೆಯಬೇಕಾಗಿದೆ.
ಈ ಆದೇಶದ ಅನುಸಾರ ಗ್ಯಾಸ್ ಸಿಲಿಂಡರ್ಗಳನ್ನು ಸರಬರಾಜು ಮಾಡುವ ಸಂದರ್ಭದಲ್ಲಿ ಗ್ಯಾಸ್ ಏಜೆನ್ಸಿಯಿಂದ 5 ಕಿ.ಮೀ. ಒಳಗೆ ಡೋರ್ ಡೆಲಿವರಿ ಮಾಡುವದು ಉಚಿತವಾಗಿದೆ. 5 ಕಿ.ಮೀ. ಕ್ಕಿಂತ ಹೆಚ್ಚು ಇದ್ದಲ್ಲಿ ಪ್ರತೀ ಕಿ.ಮೀ.ಗೆ ರೂ. 1.60 ನೀಡಬೇಕಾಗುತ್ತದೆ. ಇದನ್ನು ಹೊರತುಪಡಿಸಿ ಹೆಚ್ಚುವರಿ ಮೊತ್ತ ಸಂಗ್ರಹಿಸದಂತೆ ಕಟ್ಟುನಿಟ್ಟಿನ ಎಚ್ಚರಿಕೆಯನ್ನು ಈಗಾಗಲೇ ಎಲ್ಲಾ ಗ್ಯಾಸ್ ಏಜೆನ್ಸಿದಾರರಿಗೆ ನೀಡಲಾಗಿದೆ. ಹೆಚ್ಚಿನ ದರ ವಸೂಲಿ ಬಗ್ಗೆ ದೂರನ್ನು ಸಲ್ಲಿಸುವಂತೆ ಕೋರಿದ್ದಾರೆ.