*ಗೋಣಿಕೊಪ್ಪಲು, ಜು. 19: ವೀರಾಜಪೇಟೆ ತಾಲೂಕಿನ 28 ಕೃಷಿಪತ್ತಿನ ಸಹಕಾರ ಸಂಘದ ಮೂಲಕ ಸುಮಾರು 2,917 ರೈತರ ಒಟ್ಟು 20 ಕೋಟಿ 86 ಲಕ್ಷದ 53 ಸಾವಿರ ರೂಪಾಯಿ ಸಾಲ ಮನ್ನಾ ಗೊಂಡಿದೆ ಎಂದು ತಾಲೂಕು ಸಹಕಾರ ಸಂಘದ ಅಧಿಕಾರಿ ಮೋಹನ್ ಮಾಹಿತಿ ನೀಡಿದ್ದಾರೆ. ಪೆÇನ್ನಂಪೇಟೆ ಸಾಮಥ್ರ್ಯ ಸೌಧ ಸಭಾಂಗಣದಲ್ಲಿ ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ವಿಚಾರ ಮಂಡಿಸಿದರು.

9,989 ರೈತ ಫಲಾನುಭವಿಗಳು ಸಾಲ ಮನ್ನಾಕ್ಕೆ ಅರ್ಹರಾಗಿದ್ದು, ಒಟ್ಟು 85 ಕೋಟಿ 46 ಲಕ್ಷದ 77 ಸಾವಿರ ರೂಪಾಯಿಗಳು ಅನುದಾನ ಸರ್ಕಾರದಿಂದ ಬರಬೇಕು. ಆದರೆ ಮೊದಲ ಹಂತದಲ್ಲಿ 2,917 ರೈತ ಫಲಾನುಭವಿಗಳ ಸಾಲ ಮನ್ನಾಕ್ಕೆ ಅರ್ಹರಾಗಿದ್ದಾರೆ. ಈ ಪ್ರಕಾರ 20 ಕೋಟಿ 86 ಲಕ್ಷದ 53 ಸಾವಿರ ರೂಪಾಯಿಗಳು ಸಾಲ ಮನ್ನಾವಾಗಿದೆ ಎಂದು ತಿಳಿಸಿದರು. ಒಂದು ಲಕ್ಷ ಒಳಗಿನ ಸಾಲ ಹೊಂದಿದ ರೈತ ಫಲಾನುಭವಿಗಳು 3,650 ಅರ್ಜಿದಾರರಾಗಿದ್ದು, ಈ ಪ್ರಕಾರ ಸಾಲದ ಮೊತ್ತ 22 ಕೋಟಿ 34 ಲಕ್ಷದ 77 ಸಾವಿರವಾಗಿದೆ. 6,339 ರೈತ ಸದಸ್ಯರು ಒಂದು ಲಕ್ಷ ಮೇಲ್ಪಟ್ಟ ಸಾಲ ಹೊಂದಿರುವ ರೈತರು 63 ಕೋಟಿ 39 ಲಕ್ಷ ಸಾಲ ಮನ್ನಾಕ್ಕೆ ಒಳಪಟ್ಟಿದ್ದಾರೆ ಎಂದು ಹೇಳಿದರು.

ಕುಟ್ಟ ಬಾಲಕಿಯರ ವಸತಿ ನಿಲಯದಲ್ಲಿ ಅವ್ಯವಸ್ಥೆ ಎದ್ದು ಕಾಣುತ್ತಿದೆ. ವಿದ್ಯುತ್ ಬೆಳಕು, ಬಿಸಿ ನೀರಿನ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಕಾಡುತ್ತಿದೆ. ಮಕ್ಕಳಿಗೆ ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಇಲ್ಲದೇ ಇರುವದರಿಂದ ವಾರದ ಒಂದು ದಿನ ತಮ್ಮ ಮನೆಗಳಿಗೆ ತೆರಳಿ ಸ್ನಾನ ಮಾಡಿ ಬರುವ ಸ್ಥಿತಿ ಎದುರಾಗಿದೆ. ಈ ಬಗ್ಗೆ ಕ್ರಮ ಕೈಗೊಂಡು

(ಮೊದಲ ಪುಟದಿಂದ) ಸೂಕ್ತ ವ್ಯವಸ್ಥೆ ಕಲ್ಪಿಸಬೇಕೆಂದು ತಾ.ಪಂ. ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ ಪರಿಶಿಷ್ಟ ವರ್ಗದ ಕಲ್ಯಾಣ ಇಲಾಖೆಯ ಅಧಿಕಾರಿ ದೇವರಾಜ್ ಅವರಿಗೆ ಸೂಚಿಸಿದರು. ಕೃಷಿ ಇಲಾಖೆಯಲ್ಲಿ ಬ್ಯಾಟರಿ ಚಾಲಿತ ಯಂತ್ರ ಕಳಪೆ ಮಟ್ಟದಾಗಿದೆ. ಈ ಬಗ್ಗೆ ಗಮನ ಹರಿಸಿ ಉತ್ತಮ ಯಂತ್ರಗಳನ್ನು ವಿತರಿಸಲು ಮುಂದಾಗಬೇಕೆಂದು ಸಲಹೆ ನೀಡಿದರು.

ಕೃಷಿ ಇಲಾಖೆಯಲ್ಲಿ ಕಾಟಾಚಾರಕ್ಕೆ ಬೀಜೋಪಚಾರ ಕಾರ್ಯಕ್ರಮವನ್ನು ಹೋಬಳಿ ಮಟ್ಟದಲ್ಲಿ ನಡೆಸಲಾಗುತ್ತಿದೆ. ಜೂನ್ ತಿಂಗಳಿನಲ್ಲಿ ಮಾಡಬೇಕಾದ ಈ ಕಾರ್ಯ ಜುಲೈ ಅಂತ್ಯದಲ್ಲಿ ನಡೆಸುತ್ತಿರುವದು ಯಾವ ಸಾಧನೆಗೆ. ಅಧಿಕಾರಿಗಳಿಗೆ ಈ ಬಗ್ಗೆ ಅಲ್ಪ ಜ್ಞಾನವಾದರೂ ಇರಬಾರದೇ ಎಂದು ತಾ.ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್ ಕುಮಾರ್ ಕೃಷಿ ಅಧಿಕಾರಿಗಳ ವಿರುದ್ದ ಕಿಡಿಕಾರಿದರು.

ತಾಲೂಕಿನ ಬಹುತೇಕ ಶಾಲೆಗಳಿಗೆ ಅಂಚೆಯ ಮೂಲಕ ಧರ್ಮ ಗ್ರಂಥಗಳನ್ನು ವಿತರಿಸಲಾಗುತ್ತಿದೆ. ಈ ಬಗ್ಗೆ ಯಾವ ಕ್ರಮ ಕೈಗೊಂಡಿದೀರಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲಾ ಬೆಳಗಿ ಅವರನ್ನು ಉಪಾಧ್ಯಕ್ಷ ನೆಲ್ಲೀರ ಚಲನ್‍ಕುಮಾರ್ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧಿಕಾರಿ ತಾಲೂಕಿನ ಸುಮಾರು 26 ಶಾಲೆಯಿಂದ ಈ ಕೃತಿಗಳನ್ನು ಹಿಂಪಡೆದುಕೊಂಡು ಅಂಚೆಯ ಮೂಲಕ ಕಳುಹಿಸಿದ ಅನಾಮಿಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ತನಿಖೆ ನಡೆಸಬೇಕೆಂದು ಪೆÇಲೀಸ್ ಇಲಾಖೆಗೆ ದೂರು ನೀಡಿದ್ದೇವೆ ಎಂದು ತಿಳಿಸಿದರು.

ಕಂದಾಯ ಇಲಾಖೆಯಲ್ಲಿರುವ ಸಮಸ್ಯೆಗಳನ್ನು ಶೀಘ್ರದಲ್ಲಿ ಬಗೆಹರಿಸಿ ಕಡತಗಳ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುವದು ಮತ್ತು ವಸತಿ ರಹಿತರಿಗೆ ಮೀಸಲಿರಿಸಿದ ಸ್ಥಳಗಳು ಒತ್ತುವರಿಯಾಗಿದ್ದರೆ ಅಂತಹ ಸ್ಥಳಗಳನ್ನು ತೆರವುಗೊಳಿಸಿ ನಿವೇಶನ ರಹಿತರಿಗೆ ಹಂಚಿಕೆ ಮಾಡಲಾಗುವದು ಎಂದು ತಹಶೀಲ್ದಾರ್ ಪುರಂದರ ಸಭೆಗೆ ಮಾಹಿತಿ ನೀಡಿದರು. ಮೀನುಗಾರಿಕೆ ಇಲಾಖೆಯಲ್ಲಿ ಫಲಾನುಭವಿಗಳು ಮೀನು ಮರಿಗಳಿಗೆ ಅರ್ಜಿ ಸಲ್ಲಿಸುವಂತೆ ಸಭೆಗೆ ಅಧಿಕಾರಿ ಪ್ರಿಯ ಮಾಹಿತಿ ನೀಡಿದರು. ಅಬಕಾರಿ ಇಲಾಖೆಯ ವತಿಯಿಂದ ಕಳೆದ ತಿಂಗಳಿನಲ್ಲಿ ಮೂರು ಕೋಟಿ ಹನ್ನೊಂದು ಲಕ್ಷ ಆದಾಯ ಸರ್ಕಾರಕ್ಕೆ ಸಲ್ಲಿಸಿದೆ ಎಂದು ತಾಲೂಕು ಅಧಿಕಾರಿ ಶ್ರೀನಿವಾಸ್ ಸಭೆಗೆ ತಿಳಿಸಿದರು. ಇಲಾಖೆಯ ವತಿಯಿಂದ ಅಕ್ರಮ ಮಧ್ಯ ಮಾರಾಟ ಮಾಡುವವರ ಮೇಲೆ ದಾಳಿ ನಡೆಸಿ 99 ಪ್ರಕರಣಗಳು ಬೆಳಕಿಗೆ ಬಂದಿದ್ದು, 58 ಅಕ್ರಮ ಸೇಂದಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ತಾಲೂಕಿನಲ್ಲಿ 2 ಡೆಂಗ್ಯೂ, ಒಂದು ಎಚ್1ಎನ್1 ಪ್ರಕರಣ ದಾಖಲಾಗಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಡಾ. ಯತಿರಾಜ್ ಮಾಹಿತಿ ನೀಡಿದ್ದಾರೆ. ಈಗಾಗಲೇ 2 ಡೆಂಗ್ಯೂ ಪ್ರಕರಣ ದಾಖಲಾಗಿದೆ. ಎಚ್1ಎನ್1 ಕಾಯಿಲೆಗೆ ಒಬ್ಬ ಸಾವೀಗೀಡಾಗಿದ್ದು, ಮತ್ತೊಂದು ಶಂಕಿತ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದರು.

ಎಚ್1ಎನ್1 ಆರಂಭದಲ್ಲಿ ಸಾಮಾನ್ಯವಾಗಿ ಶೀತ, ಜ್ವರ ಇರುತ್ತದೆ. ನಂತರದ ಅವಧಿಯಲ್ಲಿ ಉಸಿರಾಟದ ತೊಂದರೆ ಕಾಡಿದಾಗ ಅಂತವರನ್ನು ಪರೀಕ್ಷಿಸಲಾಗುತ್ತಿದೆ. ಇದರಿಂದ ಕಾಯಿಲೆಯ ಅರಿವಾಗುತ್ತಿದೆ ಎಂದು ಅವರು ಹೇಳಿದರು. ಶೀತ, ಜ್ವರ ನಂತರ ಉಸಿರಾಟದ ತೊಂದರೆ ಕಾಡಿದಾಗ ಸಾರ್ವಜನಿಕರು ವೈದ್ಯಕೀಯ ಪರೀಕ್ಷೆಗೆ ಒಳಪಡಬೇಕಾಗಿದೆ ಎಂದು ಅವರು ತಿಳಿಸಿದರು. ಸಹಕಾರ ಸಂಘಗಳ ಮೂಲಕ ಸಾಲ ಮನ್ನಾ ಪ್ರಕ್ರಿಯೆಯಲ್ಲಿನ ತಾಂತ್ರಿಕ ತೊಂದರೆಯಿಂದ ಸಮಸ್ಯೆಯಾಗಿದೆ ಎಂದು ಸಹಕಾರ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು. ನೂತನ ತಂತ್ರಜ್ಞಾನದ ಪಡಿತರ ಚೀಟಿ ಮಾತ್ರ ಸಾಲಗಾರರ ದಾಖಲೆಗಳ ತಂತ್ರಾಂಶದಲ್ಲಿ ತೆಗೆದುಕೊಳ್ಳುತ್ತದೆ. ಆಧಾರ್ ದಾಖಲೆ ಕ್ರಮಬದ್ಧವಾಗಿಲ್ಲದ ಕಾರಣ ಶೇ. 30 ರಷ್ಟು ದಾಖಲೆ ಜೋಡಣೆ ಸಮಸ್ಯೆ ಉಂಟಾಗಿದೆ ಎಂದು ಅವರು ನೀಡಿದರು.

ಪ್ರತೀ ಮನೆಗೂ ವಿದ್ಯುತ್ ಕಲ್ಪಿಸುವ ಕೇಂದ್ರ ಸರ್ಕಾರದ ಯೋಜನೆಗಳನ್ನು ಅಧಿಕಾರಿಗಳು ಅನುಷ್ಠಾನಗೊಳಿಸಲು ಮುಂದಾಗಬೇಕು ಎಂದು ತಾ. ಪಂ. ಉಪಾಧ್ಯಕ್ಷ ನೆಲ್ಲೀರ ಚಲನ್ ಒತ್ತಾಯಿಸಿದರು. ಸಾಕಷ್ಟು ಮನೆಗಳಿಗೆ ವಿದ್ಯುತ್ ಸಂಪರ್ಕ ಬಾಕಿ ಉಳಿದಿದೆ. 2020 ರಲ್ಲಿ ಸಂಪೂರ್ಣ ವಿದ್ಯುತ್ ಗ್ರಾಮ ಎಂಬ ಕೇಂದ್ರದ ಚಿಂತನೆಗೆ ಪ್ರೋತ್ಸಾಹ ನೀಡಲು ಅಧಿಕಾರಿಗಳು ನಿಗಾ ವಹಿಸಬೇಕು ಎಂದರು. ಯೋಜನೆ ಅನುಷ್ಠಾನ ಪ್ರಗತಿಯಲ್ಲಿದೆ. ಹಂತ ಹಂತವಾಗಿ ಪೂರ್ಣಗೊಳಿಸಲಾಗುವದು ಎಂದು ಅಧಿಕಾರಿಗಳು ಭರವಸೆ ನೀಡಿದರು.

ಬಿರುನಾಣಿ ಭಾಗಕ್ಕೆ ಅಳವಡಿಸಿರುವ ‘ಎಕ್ಸ್‍ಪ್ರೆಸ್’ ವಿದ್ಯುತ್ ಮಾರ್ಗ ಮರಗಳ ರೆಂಬೆಗಳ ಕೆಳಗೆ ಹಾದು ಹೋಗಿರುವದರಿಂದ ವಿದ್ಯುತ್ ಸಮಸ್ಯೆ ನಿರಂತರವಾಗಿದೆ. ಬಿರುನಾಣಿಯಲ್ಲಿ ಸೆಸ್ಕ್ ಅಧಿಕಾರಿಗಳು ಸ್ಥಳೀಯರೊಂದಿಗೆ ವಿಶೇಷ ಸಭೆ ನಡೆಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದರು. ಚುನಾಯಿತ ಜನಪ್ರತಿನಿಧಿಗಳ ಸಭೆ ಆಯೋಜಿಸಲು ಒತ್ತಾಯಿಸಿದರು. ಸ್ಪಂದಿಸುತ್ತಿಲ್ಲ. ಬೇರೆ ಸಂಘಗಳೊಂದಿಗೆ ಸಭೆ ನಡೆಸುತ್ತಿರುವದು ಎಷ್ಟು ಸರಿ? ಶೀಘ್ರವಾಗಿ ಸಭೆ ಕರೆಯುವಂತೆ ಉಪಾಧ್ಯಕ್ಷರು ಒತ್ತಾಯಿಸಿದರು.

ಪಶು ಸಂಗೋಪನೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ತೋಟಗಾರಿಕೆ, ಹಿಂದುಳಿದ ವರ್ಗ, ಅರಣ್ಯ ಇಲಾಖೆ, ಚೆಸ್ಕಾಂ, ಗ್ರಾಮೀಣ ಕುಡಿಯುವ ನೀರು, ಕಾರ್ಮಿಕ ಇಲಾಖೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿಯ ಬಗ್ಗೆ ಸಭೆಯಲ್ಲಿ ಮಾಹಿತಿ ನೀಡಿದರು. ಸಭೆಯಲ್ಲಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಜನಿತ್, ತಹಶೀಲ್ದಾರ್ ಪುರಂದರ, ಕಾರ್ಯ ನಿರ್ವಹಣಾಧಿಕಾರಿ ಹೆಚ್. ಷಣ್ಮುಗಂ ಉಪಸ್ಥಿತರಿದ್ದು ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

-ಚಿತ್ರ ವರದಿ: ಎನ್.ಎನ್. ದಿನೇಶ್, ಸುದ್ದಿಪುತ್ರ