ನಾಪೆÇೀಕ್ಲು, ಜು. 19: ಕೊಡಗಿನ ಮಳೆ ದೇವರು, ಕುಲ ದೇವರು ಎಂದು ಖ್ಯಾತಿ ಗಳಿಸಿರುವ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳ ರಸ್ತೆಯನ್ನು ಕಳೆದ ಒಂದು ವರ್ಷಗಳ ಹಿಂದೆ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯನ್ನಾಗಿ ನಿರ್ಮಿಸುವದರ ಮೂಲಕ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಲಾಗಿದೆ. ಆದರೆ ಕಕ್ಕಬ್ಬೆ ನಾಪೆÇೀಕ್ಲು, ಜು. 19: ಕೊಡಗಿನ ಮಳೆ ದೇವರು, ಕುಲ ದೇವರು ಎಂದು ಖ್ಯಾತಿ ಗಳಿಸಿರುವ ಕಕ್ಕಬ್ಬೆ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳ ರಸ್ತೆಯನ್ನು ಕಳೆದ ಒಂದು ವರ್ಷಗಳ ಹಿಂದೆ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯನ್ನಾಗಿ ನಿರ್ಮಿಸುವದರ ಮೂಲಕ ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಲಾಗಿದೆ. ಆದರೆ ಕಕ್ಕಬ್ಬೆ ಮೀ. ರಸ್ತೆಯನ್ನು ಕೂಡಲೇ ನಿರ್ಮಿಸಿಕೊಡಬೇಕೆಂದು ಸ್ಥಳದಲ್ಲಿದ್ದ ಗುತ್ತಿಗೆದಾರರಿಗೆ ಸೂಚನೆ ನೀಡಿದ್ದರು. ಅದರಂತೆ ಹಳೇ ರಸ್ತೆಯ ಡಾಮರುಗಳನ್ನು ಜೆ.ಸಿ.ಬಿ. ಯಂತ್ರದ ಮೂಲಕ ತೆಗೆಯಲಾಯಿತು. ಮಳೆಗಾಲ ಆರಂಭವಾದ ಹಿನ್ನಲೆಯಲ್ಲಿ ರಸ್ತೆ ಕಾಮಗಾರಿ ಸ್ಥಗಿತಗೊಳಿಸ ಲಾಯಿತು. ಆದರೆ ಅದು ನಡೆದು ಒಂದು ವರ್ಷಕಳೆದರೂ ರಸ್ತೆ ದುರಸ್ತಿ ಕಾರ್ಯ ಆರಂಭಗೊಳ್ಳಲೇ ಇಲ್ಲ.
ಮಳೆಗಾಲದಲ್ಲಿ ಕಕ್ಕಬ್ಬೆ ಹೊಳೆ ಪ್ರವಾಹ ಈ ಗುಂಡಿ ರಸ್ತೆಯಲ್ಲಿ ಹರಿಯುತ್ತದೆ. ಆಗ ಪಾದಾಚಾರಿಗಳಿಗೆ ಮತ್ತು ವಾಹನಗಳಿಗೆ ಅಪಾಯ ಸಂಭವಿಸುವ ಭೀತಿ ಇದೆ. ಆದುದರಿಂದ ಸಂಬಂಧಿಸಿದವರು ಈ ರಸ್ತೆ ದುರಸ್ತಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು, ಭಕ್ತಾದಿಗಳು ಆಗ್ರಹಿಸಿದ್ದಾರೆ.
-ಪ್ರಭಾಕರ್