ನಾಪೋಕ್ಲು, ಜು. 19: ಹೋಬಳಿ ವ್ಯಾಪ್ತಿಯಲ್ಲಿ ಮೋಡದ ವಾತಾವರಣ ಕಾಣಿಸಿ ಕೊಂಡಿತಾದರೂ ಮಳೆ ಸುರಿಯಲಿಲ್ಲ. ಕೆಲವೆಡೆ ಎರಡು ದಿನಗಳಿಂದ ಅಲ್ಪಸ್ವಲ್ಪ ಮಳೆಯಾಗಿದೆ. ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆ ಸುರಿಯುತ್ತಿದ್ದು ಭತ್ತದ ಕೃಷಿ ಮಂದಗತಿಯಲ್ಲಿ ಸಾಗುತ್ತಿದೆ. ಗದ್ದೆಗಳಲ್ಲಿ ಭತ್ತದ ಬಿತ್ತನೆ ಮಾಡಲಾಗಿದ್ದು ಸಸಿಮಡಿಗಳು ತಯಾರಾಗುತ್ತಿವೆ. ಇನ್ನು ಬೇತು, ಕೈಕಾಡು, ಪಾರಾಣೆ, ಬಲಮುರಿ ಮತ್ತಿತರ ಭಾಗಗಳಲ್ಲಿ ರೈತರು ಈಗಷ್ಟೇ ಭತ್ತದ ಬಿತ್ತನೆ ಮಾಡುತ್ತಿದ್ದಾರೆ.

ಕಾವೇರಿ ನದಿಯಲ್ಲಿ ಪ್ರವಾಹ ಏರ್ಪಟ್ಟು ನಾಟಿ ಮಾಡಿದ ಗದ್ದೆಗಳಲ್ಲಿ ಸಮಸ್ಯೆ ಆಗುತ್ತಿತ್ತು. ಈ ಬಾರಿ ಜೋರಾಗಿ ಮಳೆ ಸುರಿಯದಿ ರುವದರಿಂದ ಭತ್ತದ ಸಸಿಮಡಿ ಮಾಡಲು ಸಮಸ್ಯೆ ಇಲ್ಲ. ಆದರೆ ಭತ್ತದ ಕೃಷಿ ಕೈಗೊಳ್ಳಲು ನೀರಿನದ್ದೇ ಸಮಸ್ಯೆ ಎಂದು ರೈತರು ಅಭಿಪ್ರಾಯ ಪಡುತ್ತಾರೆ.