ಮಡಿಕೇರಿಯ ಹೊಸ ಬಡಾವಣೆ ರಸ್ತೆಯ ರಾಡ್ರಿಗಸ್ ಬಿಲ್ಡಿಂಗ್ ಜಂಕ್ಷನ್ ಬಳಿ ವಾಹನಗಳ ವೇಗದ ಓಡಾಟದಿಂದಾಗಿ ಅವಘಡಗಳು ಸಂಭವಿಸುತ್ತಿದ್ದವು. ಈ ಬಗ್ಗೆ ‘ಶಕ್ತಿ’ ಮೂಲಕ ಮನವಿ ಮಾಡಿದ ಮೇರೆಗೆ ಸ್ಪಂದನ ದೊರಕಿದ್ದು, ರಸ್ತೆಯಲ್ಲಿ ರಸ್ತೆ ಉಬ್ಬು ನಿರ್ಮಿಸಲಾಗಿದೆ. ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳಿಗೆ, ಪೊಲೀಸ್ ಉನ್ನತಾಧಿಕಾರಿಗಳಿಗೆ, ನಗರ ಸಂಚಾರಿ ಪೊಲೀಸರಿಗೆ, ಸಹಕರಿಸಿದ ಶಕ್ತಿ ದಿನಪತ್ರಿಕೆಗೆ ಧನ್ಯವಾದಗಳು.

-ಎ.ಜಿ. ಹರೀಶ್, ಹೊಸ ಬಡಾವಣೆ