ಮಡಿಕೇರಿ, ಜು. 20: ಕಳೆದ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ ಗಡಿ ಭಾಗದಲ್ಲಿರುವ ಸಂಪಾಜೆ ವ್ಯಾಪ್ತಿಯಲ್ಲಿ ಹಾಗೂ ಕಡಮಕಲ್ ಶ್ರೇಣಿಯ ತಪ್ಪಲಿನ ಗ್ರಾಮೀಣ ಭಾಗಗಳಲ್ಲಿ ಸರಾಸರಿ 3 ಇಂಚುಗಳಿಗೂ ಅಧಿಕ ಮಳೆಯಾಗಿದೆ. ಇನ್ನು ಭಾಗಮಂಡಲ ವ್ಯಾಪ್ತಿಯಲ್ಲಿ 2.75 ಇಂಚು ಹಾಗೂ ತಲಕಾವೇರಿಯಲ್ಲಿ 3.46 ಇಂಚು ಮಳೆ ದಾಖಲಾಗಿದೆ.ಕೊಡಗು ಜಿಲ್ಲೆಯಲ್ಲಿ ಸರಾಸರಿ 1 ಇಂಚು ಮಳೆಯೊಂದಿಗೆ, ಇದುವರೆಗೆ ಒಟ್ಟು 29.87 ಇಂಚು ದಾಖಲಾಗಿದೆ. ಹಿಂದಿನ ವರ್ಷ ಈ ವೇಳೆಗೆ 90.90 ಇಂಚು ಸರಾಸರಿ ಮಳೆಯಾಗಿತ್ತು. ಅಂತೆಯೇ ಮಡಿಕೇರಿ ತಾಲೂಕಿನಲ್ಲಿ ಕಳೆದ 24 ಗಂಟೆಗಳಲ್ಲಿ 2.06 ಇಂಚು ಹಾಗೂ ಪ್ರಸಕ್ತ ಅವಧಿಗೆ ಒಟ್ಟು 39.34 ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಹೊತ್ತಿಗೆ 126.94 ಇಂಚು ಮಳೆಯಾಗಿತ್ತು.ಇನ್ನು ವೀರಾಜಪೇಟೆ ತಾಲೂಕಿನ ಕಳೆದ 24 ಗಂಟೆಗಳಲ್ಲಿ 0.46 ಇಂಚು ಹಾಗೂ ವರ್ಷಾರಂಭದಿಂದ ಈ ತನಕ 33.06 ಇಂಚು ಮಳೆ ಆಗಿದೆ. ಕಳೆದ ಅವಧಿಯಲ್ಲಿ 75.13 ಇಂಚು ದಾಖಲಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ ಹಿಂದಿನ 24 ಗಂಟೆ ಅವಧಿಗೆ 0.35 ಇಂಚು ಮಳೆಯೊಂದಿಗೆ ಈ ತನಕ ಒಟ್ಟು 17.41 ಇಂಚು ಮಳೆ ದಾಖಲಾಗಿದೆ. ಕಳೆದ ವರ್ಷ ಈ ಅವಧಿಗೆ 70.64 ಇಂಚು ಮಳೆಯಾಗಿತ್ತು.
ಹಾರಂಗಿ: ಹಾರಂಗಿ ಜಲಾಶಯದಲ್ಲಿ ಕಳೆದ ಒಂದು ವಾರದಿಂದ ಕೇವಲ 2 ಅಡಿಗಳಷ್ಟು ನೀರಿನ ಮಟ್ಟದಲ್ಲಿ ಏರಿಕೆ ಗೋಚರಿಸಿದೆ. 2859 ಅಡಿಗಳಷ್ಟು ಗರಿಷ್ಠ ಮಟ್ಟಕ್ಕಿಂತ ಪ್ರಸಕ್ತ 2823.27 ಅಡಿ ನೀರಿನೊಂದಿಗೆ, 35.73 ಅಡಿ ಕಡಿಮೆ ಗೋಚರಿಸಿದೆ. ಕಳೆದ ವರ್ಷ 2856.50 ಅಡಿ ಸಂಗ್ರಹಗೊಂಡಿತ್ತು. ಪ್ರಸಕ್ತ ಜಲಾಶಯಕ್ಕೆ 2280 ಕ್ಯೂಸೆಕ್ಸ್ ನೀರು ಬರುತ್ತಿದೆ. ಕಳೆದ ವರ್ಷ ಈ ವೇಳೆಗೆ 7305 ಕ್ಯೂಸೆಕ್ಸ್ ಒಳ ಹರಿವು ಕಂಡು ಬಂದಿತ್ತು.
ತುಂತುರು ಮಳೆ
ಶ್ರೀಮಂಗಲ: ಭಾರತೀಯ ಹವಾಮಾನ ಇಲಾಖೆ ಕೊಡಗು ಜಿಲ್ಲೆಯಲ್ಲಿ ತಾ.20 ರಿಂದ 23ರ ತನಕ ಅಧಿಕ ಮಳೆಯಾಗುವ
ಮಡಿಕೇರಿ, ಜು. 20: ಕಳೆದ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ ಗಡಿ ಭಾಗದಲ್ಲಿರುವ ಸಂಪಾಜೆ ವ್ಯಾಪ್ತಿಯಲ್ಲಿ ಹಾಗೂ ಕಡಮಕಲ್ ಶ್ರೇಣಿಯ ತಪ್ಪಲಿನ ಗ್ರಾಮೀಣ ಭಾಗಗಳಲ್ಲಿ ಸರಾಸರಿ 3 ಇಂಚುಗಳಿಗೂ ಅಧಿಕ ಮಳೆಯಾಗಿದೆ. ಇನ್ನು ಭಾಗಮಂಡಲ ವ್ಯಾಪ್ತಿಯಲ್ಲಿ 2.75 ಇಂಚು ಹಾಗೂ ತಲಕಾವೇರಿಯಲ್ಲಿ 3.46 ಇಂಚು ಮಳೆ ದಾಖಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಸರಾಸರಿ 1 ಇಂಚು ಮಳೆಯೊಂದಿಗೆ, ಇದುವರೆಗೆ ಒಟ್ಟು 29.87 ಇಂಚು ದಾಖಲಾಗಿದೆ. ಹಿಂದಿನ ವರ್ಷ ಈ ವೇಳೆಗೆ 90.90 ಇಂಚು ಸರಾಸರಿ ಮಳೆಯಾಗಿತ್ತು. ಅಂತೆಯೇ ಮಡಿಕೇರಿ ತಾಲೂಕಿನಲ್ಲಿ ಕಳೆದ 24 ಗಂಟೆಗಳಲ್ಲಿ 2.06 ಇಂಚು ಹಾಗೂ ಪ್ರಸಕ್ತ ಅವಧಿಗೆ ಒಟ್ಟು 39.34 ಇಂಚು ಮಳೆಯಾಗಿದೆ. ಕಳೆದ ವರ್ಷ ಈ ಹೊತ್ತಿಗೆ 126.94 ಇಂಚು ಮಳೆಯಾಗಿತ್ತು.
ಇನ್ನು ವೀರಾಜಪೇಟೆ ತಾಲೂಕಿನ ಕಳೆದ 24 ಗಂಟೆಗಳಲ್ಲಿ 0.46 ಇಂಚು ಹಾಗೂ ವರ್ಷಾರಂಭದಿಂದ ಈ ತನಕ 33.06 ಇಂಚು ಮಳೆ ಆಗಿದೆ. ಕಳೆದ ಅವಧಿಯಲ್ಲಿ 75.13 ಇಂಚು ದಾಖಲಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ ಹಿಂದಿನ 24 ಗಂಟೆ ಅವಧಿಗೆ 0.35 ಇಂಚು ಮಳೆಯೊಂದಿಗೆ ಈ ತನಕ ಒಟ್ಟು 17.41 ಇಂಚು ಮಳೆ ದಾಖಲಾಗಿದೆ. ಕಳೆದ ವರ್ಷ ಈ ಅವಧಿಗೆ 70.64 ಇಂಚು ಮಳೆಯಾಗಿತ್ತು.