ಮಡಿಕೇರಿ, ಜು.20 : ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಉಂಟಾದ ಪ್ರಾಕೃತಿಕ ವಿಕೋಪದಲ್ಲಿ ಮನೆ ಕಳೆದುಕೊಂಡ ವಿವಿಧ ಧರ್ಮಗಳ ಏಳು ಕುಟುಂಬಗಳಿಗೆ ಮನೆ ನಿರ್ಮಿಸಿಕೊಳ್ಳಲು ಆರ್ಥಿಕ ನೆರವು ನೀಡಲು ಎಸ್ಕೆಎಸ್ಎಸ್ಎಫ್ ಮುಂದಾಗಿದೆ. ಪ್ರಥಮ ಕಂತಿನಲ್ಲಿ ಒಟ್ಟು 3.50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸಂಘÀಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಫ್ ಮಿಸ್ಬಾಹಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕಳೆದ ಸಾಲಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಂಘಟನೆಯ ಮುಖಂಡರು ಭೇಟಿ ನೀಡಿ, ಪ್ರವಾಹ ದಿಂದ ಉಂಟಾದ ಹಾನಿಯನ್ನು ಪರಿಶೀಲಿಸಿ, ಮನೆಮಠ ಕಳೆದುಕೊಂಡ ಸಂತ್ರಸ್ತರಿಗೆ 1 ಲಕ್ಷ ರೂ.ಗಳಿಗೂ ಅಧಿಕ ಮೊತ್ತವನ್ನು ವಿತರಿಸಿದ್ದರು. ಪ್ರಸಕ್ತ ಕೇಂದ್ರ ಸಮಿತಿ ವತಿಯಿಂದ ಪ್ರತಿ ಕುಟುಂಬಕ್ಕೆ ತಲಾ 50 ಸಾವಿರ ರೂ.ಗಳಂತೆ ಮೊದಲ ಕಂತಿನಲ್ಲಿ ಏಳು ಕುಟುಂಬಗಳಿಗೆ ಒಟ್ಟು 3.50 ಲಕ್ಷ ರೂ.ಗಳನ್ನು ವಿತರಿಸಲಾಗುವದೆಂದು ತಿಳಿಸಿದರು.
ತಾ.23 ರಂದು ಬೆಳಗ್ಗೆ 10.30 ಗಂಟೆಗೆ ಕುಶಾಲನಗರದ ದಾರುಲ್ ಉಲಮಾ ಅಡಿಟೋರಿಯಂನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಕುಶಾಲನಗರದ 6 ಹಾಗೂ ಕೊಡ್ಲಿಪೇಟೆಯ ಒಂದು ಕುಟುಂಬಕ್ಕೆ ಪರಿಹಾರ ನಿಧಿಯನ್ನು ಹಸ್ತಾಂತರಿಸಲಾಗುವದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಡಗು ಜಿಲ್ಲಾ ಉಪ ಖಾಝಿ ಅಬ್ದುಲ್ಲಾ ಫೈಝಿ ವಹಿಸಲಿದ್ದು, ಕುಶಾಲನಗರದ ವೃತ್ತ ನಿರೀಕ್ಷಕ ಕುಮಾರ ಆರಾಧ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿ ದ್ದಾರೆ. ಎಸ್ಕೆಎಸ್ಎಸ್ಎಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ ಅವರು ಮುಖ್ಯ ಭಾಷಣ ಮಾಡಲಿದ್ದು, ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ, ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಕೆ.ಎ.ಯಾಕೂಬ್, ಜಿಲ್ಲಾ ಮದ್ರಸ ಮ್ಯಾನೇಜ್ಮೆಂಟ್ ಅಧ್ಯಕ್ಷ ಉಸ್ಮಾನ್ ಹಾಜಿ, ಎಸ್ಕೆಎಸ್ಎಸ್ಎಫ್ ಜಿಲ್ಲಾಧ್ಯಕ್ಷ ನೌಷಾದ್ ಫೈಝಿ, ಕುಶಾಲನಗರ ಪಟ್ಟಣ ಪಂಚಾಯ್ತಿ ಸದಸ್ಯ ಕಲೀಮುಲ್ಲಾ, ಮಾಜಿ ಸದಸ್ಯ ಅಬ್ದುಲ್ ಖಾದರ್, ಕುಶಾಲನಗರ ಹಿಲಾಲ್ ಮಸೀದಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್, ಮಡಿಕೆÉೀರಿ ರೇಂಜ್ ಮ್ಯಾನೇಜ್ಮೆಂಟ್ ಕಾರ್ಯದರ್ಶಿ ಡಿ.ಎ. ಸುಲೈಮಾನ್ ಕೊಡ್ಲಿಪೇಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಅಶ್ರಫ್ ಮಿಸ್ಬಾಹಿ ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್ಕೆಎಸ್ ಎಸ್ಎಫ್ ಉಪಾಧ್ಯಕ್ಷ ತಮ್ಲಿಕ್ ದಾರಿಮಿ, ಕೇಂದ್ರ ಸಮಿತಿ ಸದಸ್ಯ ಉಮ್ಮರ್ ಫೈಝಿ, ರಾಜ್ಯ ಕಾರ್ಯ ದರ್ಶಿ ಆರೀಫ್ ಫೈಝಿ ಹಾಗೂ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ಮಜೀóದ್ ಕುಶಾಲನಗರ ಉಪಸ್ಥಿತರಿದ್ದರು.