ಶನಿವಾರಸಂತೆ: ಸರಕಾರಿ ಪ್ರೌಢಶಾಲೆ-ಪ್ರಾಥಮಿಕ ಶಾಲೆಗಳಲ್ಲಿ ಪ್ರತಿ ಶನಿವಾರ ‘ಬ್ಯಾಗ್ ರಹಿತ ದಿನ’ವನ್ನು ಆಚರಣೆ ಮಾಡಲಾಗುತ್ತಿದೆ. ಆ ದಿನ ವಿದ್ಯಾರ್ಥಿಗಳ ಬಹುಮುಖ ಪ್ರತಿಭೆ ಅನಾವರಣಗೊಳಿಸುವಲ್ಲಿ ಶಿಕ್ಷಕರ ಪರಿಶ್ರಮವೂ ಅಭಿವ್ಯಕ್ತಗೊಳ್ಳುತ್ತದೆ. ಕೊಡ್ಲಿಪೇಟೆ ಹೋಬಳಿ ಬೆಸೂರು ಸರಕಾರಿ ಪ್ರೌಢಶಾಲೆಯಲ್ಲಿ ಬ್ಯಾಗ್ ರಹಿತ ದಿನದ ಆಚರಣೆಯ ಅಂಗವಾಗಿ ವಿದ್ಯಾರ್ಥಿಗಳು ಅತ್ಯಂತ ಅಪೂರ್ವವಾದ ‘ಕನ್ನಡಿ ಬರಹ’ವನ್ನು ಬರೆದು ತಮ್ಮ ಪ್ರತಿಭೆಯ ಅನಾವರಣ ಮಾಡಿದರು. ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಮಕ್ಕಳ ಖುಷಿಯಲ್ಲಿ ಭಾಗಿಗಳಾಗಿರುತ್ತಾರೆ.

ಈ ಪ್ರತಿಭೆಗೆ ಕಲಶವಿಟ್ಟಂತೆ 25ಕ್ಕೂ ಅಧಿಕ ವಿದ್ಯಾರ್ಥಿಗಳು ಭಾರತದ ಪ್ರಾಚೀನ ಕಲೆಯಾದ ಕೈ ಬೆರಳ ನೆರಳಾಟವನ್ನು ಪ್ರದರ್ಶಿಸಿ ನೋಡುಗರನ್ನು ಬೆರಗುಗೊಳಿಸಿದ್ದಾರೆ.ಗೋಣಿಕೊಪ್ಪ: ಇಲ್ಲಿನ ಕಾವೇರಿ ಕಾಲೇಜಿನ ಎನ್‍ಸಿಸಿ ವಿದ್ಯಾರ್ಥಿಗಳಿಗೆ ಅಭಿಶಿಕ್ಷಣ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಎನ್‍ಸಿಸಿ ಕೆಡೆಟ್‍ಗಳನ್ನು ಉದ್ದೇಶಿಸಿ ಮಾತನಾಡಿದ 19 ಕೆಎಆರ್ ಕಮಾಂಡಿಂಗ್ ಆಫೀಸರ್ ಕರ್ನಲ್ ವಿ.ಎಂ. ನಾಯಕ್, ಎನ್‍ಸಿಸಿ ಘಟಕವು ಪ್ರಾಥಮಿಕ ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ದೇಶಸೇವೆ, ಶಿಸ್ತು, ದೇಶ ಭಕ್ತಿ, ಒಗ್ಗಟ್ಟು, ಜಾತ್ಯತೀತ ಮನೋಭಾವನೆ ಕುರಿತು ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಕೆಡೆಟ್‍ಗಳು ಸೈನ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು ಎಂದರು. ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ. ಕೆ.ವಿ. ಕುಸುಮಾಧರ್ ಮಾತನಾಡಿ, ಎನ್‍ಸಿಸಿ ಘಟಕದಿಂದ ಆಯೋಜಿಸುವ ವಿವಿಧ ಶಿಬಿರ ಹಾಗೂ ಪರೀಕ್ಷೆಗಳಲ್ಲಿ ಉತ್ತೀರ್ಣರಾದಲ್ಲಿ ಕೇಂದ್ರ, ರಾಜ್ಯ ಸರ್ಕಾರ ಉದ್ಯೋಗ, ಉನ್ನತ ವ್ಯಾಸಂಗದಲ್ಲಿ ಮೀಸಲಾತಿಯಿದ್ದು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದರು. ಕಾವೇರಿ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಎಸ್.ಎಸ್. ಮಾದಯ್ಯ, ಎನ್‍ಸಿಸಿ ಅಧಿಕಾರಿಗಳಾದ ಎಂ.ಆರ್. ಅಕ್ರಂ, ಐ.ಡಿ. ಲೇಪಾಕ್ಷಿ, ಸುಬೇದಾರ್ ಬೀಜು, ಸಹಾಯಕ ಅಧಿಕಾರಿಗಳಾದ ಸಬಿನ್ ಥಾಪ, ಶಿಜು ಹಾಜರಿದ್ದರು.ಸುಂಟಿಕೊಪ್ಪ: ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಹೆಚ್ಚು ಜ್ಞಾನ ಸಂಪಾದನೆಯೊಂದಿಗೆ ತಮ್ಮ ಮುಂದಿನ ಜೀವನಕ್ಕೆ ಅಣಿಗೊಳಿಸಬೇಕೆಂದು ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಸಮಾರಂಭದಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಗುಡೂರು ಭೀಮಸೇನಾ ಕರೆ ನೀಡಿದರು.

ಗರಗಂದೂರು ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವನ್ನು ನೇರವೇರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯೊಂದಿಗೆ ಗುರುಗಳ ಮಾರ್ಗದರ್ಶನವನ್ನು ಪಡೆದು ಜೀವನದಲ್ಲಿ ಉತ್ತಮ ಪ್ರಜೆಗಳಾಗುವಂತೆ ಕರೆ ನೀಡಿದರು.

ಅಧ್ಯಕ್ಷತೆಯನ್ನು ಪ್ರಾಂಶುಪಾಲ ಮಂದಪ್ಪ ವಹಿಸಿದ್ದರು. ವೇದಿಕೆಯಲ್ಲಿ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ರೇವತಿ, ಆಡಳಿತ ಮಂಡಳಿ ಸದಸ್ಯರಾದ ಎಂ.ಸಿ. ಬೋಜಮ್ಮ, ಸೀತಾ, ಚಿಟ್ಟಿಯಪ್ಪ ಇದ್ದರು. ಶಿಕ್ಷಕಿ ರೀಟಾ ಸ್ವಾಗತಿಸಿ, ನಿಸರ್ಗ ನಿರೂಪಿಸಿ, ದೈಹಿಕ ಶಿಕ್ಷಣ ಶಿಕ್ಷಕ ಎಲ್.ಪಿ. ಪಾಲಾಕ್ಷ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶಿಕ್ಷಕಿ ಬಿಂದು ವಂದಿಸಿದರು.ಚೆಟ್ಟಳ್ಳಿ: ಪೊನ್ನತ್‍ಮೊಟ್ಟೆಯ ಮೌನತುಲ್ ಇಸ್ಲಾಂ ಮದರಸದಲ್ಲಿ ವಿದ್ಯಾರ್ಥಿಗಳ ಆಯ್ಕೆಗಾಗಿ ಚುನಾವಣೆ ನಡೆಯಿತು. ರಾಜಕೀಯ ಚುನಾವಣೆಯಂತೆ ಅಧ್ಯಾಪಕರುಗಳಿಂದ ವಿದ್ಯಾರ್ಥಿಗಳಿಗೆ ಅಚ್ಚುಕಟ್ಟಾದ ವ್ಯವಸ್ಥೆ ಮಾಡಲಾಗಿತ್ತು. ವಿದ್ಯಾರ್ಥಿಗಳ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಪೊಲೀಸ್ ಬಂದೋಬಸ್ತ್ ಹಾಗೂ ಎರಡು ಮತ ಕೇಂದ್ರಗಳನ್ನು ತೆರೆಯಲಾಗಿತ್ತು. ಅಭ್ಯರ್ಥಿಗಳಾದ ಶಿಬಿಲ್, ಸಿದ್ದೀಖ್, ಮಿದ್ಲಾಜ್, ಅಫೀಪ, ರಹೀನ ಹಾಗೂ ದಿಲ್ಶಾನ ನಾಮಪತ್ರ ಸಲ್ಲಿಸಿ ಚುನಾವಣೆಗೆ ಸ್ಪರ್ಧಿಸಿದರು.

ಚುನಾವಣಾ ಮುಖ್ಯಾಧಿಕಾರಿಗಳಾಗಿ ಸಹದ್ ಫೈಝಿ, ಶಾದುಲಿ ಫೈಝಿ, ಜಲಾಲ್ ಮೌಲವಿ ಮೈದು ಸಖಾಫಿ ಹಾಗೂ ಸಹಾಯಕ ಅಧಿಕಾರಿಗಳಾಗಿ ಸವಾದ್, ಸಿನಾನ್, ಆಸಿಫ್, ಅಫ್ಸಲ್, ಶಂಸೀರ್ ಕಾರ್ಯನಿರ್ವಹಿಸಿದರು.