ಕುಶಾಲನಗರ, ಜು 20: ಟಿವಿ ಚಾನಲ್ ಸಂಪಾದಕ ಎಂದು ಸುಳ್ಳು ಹೇಳಿ ವ್ಯಕ್ತಿಯೊಬ್ಬ ಬ್ಲಾಕ್‍ಮೇಲ್ ದಂಧೆ ಮಾಡುತ್ತಿದ್ದಾನೆ ಎಂದು ಜಿಲ್ಲಾಧಿಕಾರಿಗಳಿಗೆ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಕರ್ನಾಟಕ ಕಾವಲುಪಡೆ ಜಿಲ್ಲಾಧ್ಯಕ್ಷ ಎಂ.ಕೃಷ್ಣ ದೂರು ನೀಡಿ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಕುಶಾಲನಗರದ ಕೂಡ್ಲೂರು ಗ್ರಾಮ ವ್ಯಾಪ್ತಿಯ ಶಂಷುದ್ದಿನ್ ಎಂಬಾತ ಕಳೆದ ಕೆಲವು ಸಮಯ ದಿಂದ ಪಬ್ಲಿಕ್ ವಾಯ್ಸ್ ಎಂಬ ಚಾನಲ್ ಹೆಸರು ಹೇಳಿಕೊಂಡು ಲೋಗೊ ಹಿಡಿದು ಮೊಬೈಲ್ ಮೂಲಕ ವೀಡಿಯೋ ಮಾಡಿ ಜನರನ್ನು ಬ್ಲಾಕ್‍ಮೇಲ್ ಮಾಡುತ್ತಿರುವ ಬಗ್ಗೆ ದೂರಿನಲ್ಲಿ ತಿಳಿಸಿದ್ದು ಯೂಟ್ಯೂಬ್, ವ್ಯಾಟ್ಸಾಪ್ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಬಿತ್ತರಿಸುತ್ತಿರುವದು ಕೆಲವು ದಿನಗಳಿಂದ ಕಂಡುಬಂದಿದೆ. ಯಾವದೇ ಇಲಾಖೆಯಿಂದ ಅನುಮತಿ ಪಡೆದಿಲ್ಲ ಎಂದು ಎಂ.ಕೃಷ್ಣ ದೂರಿನಲ್ಲಿ ತಿಳಿಸಿದ್ದಾರೆ.