ಮಡಿಕೇರಿ, ಜು. 20: ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಮತ್ತು ಪೆರಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ಪೆರಾಜೆ ಇದರ ಸಹಯೋಗದಲ್ಲಿ ಸಂಘದ ಸಹಕಾರ ಭವನದಲ್ಲಿ ಪೆರಾಜೆ ಗ್ರಾಮದ ಸ್ತ್ರೀಶಕ್ತಿ ಮತ್ತು ಸ್ವ-ಸಹಾಯ ಸಂಘದ ಸದಸ್ಯರುಗಳಿಗೆ ಮಾಹಿತಿ ಕಾರ್ಯಾ ಗಾರವನ್ನು ಏರ್ಪಡಿಸಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ವಹಿಸಿದ್ದರು. ಆಧುನಿಕ ಜಗತ್ತಿನ ಈ ಸ್ಪರ್ದಾತ್ಮಕತೆ ಯಲ್ಲಿ ಆರ್ಥಿಕವಾಗಿ ಹಿಂದುಳಿದ ಹಳ್ಳಿಗಾಡಿನ ಜನಸಾಮಾ ನ್ಯರಿಗೆ ಸ್ವಸಹಾಯ ಸಂಘಗಳು ಆದಾರಸ್ತಂಭ ವಾಗಿದೆ. ಸರಕಾರದ ಹೊಸ ಹೊಸ ಯೋಜನೆಗಳನ್ನು ಪಡೆದುಕೊಂಡು ಅದನ್ನು ಸದ್ವಿನಿ ಯೋಗಿಸಿ, ಸ್ವಾವಲಂಬಿ ಗಳಾಗಬೇಕು ಎಂದು ಹೇಳಿದರು.
ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಉಪ ಪ್ರಧಾನ ವ್ಯವಸ್ಥಾಪಕರು, ಮೇಲ್ವಿಚಾರಕರ ವಿಭಾಗದ ಬೋಜಮ್ಮ ಅವರು ಮಾಹಿತಿ ಕಾರ್ಯಾಗಾರವನ್ನು ನಡೆಸಿಕೊಟ್ಟು, ಸ್ತ್ರೀಶಕ್ತಿ- ಸ್ವ-ಸಹಾಯ ಸಂಘಗಳ ರೂಪುರೇಷೆ, ಅವುಗಳ ಚಟುವಟಿಕೆ, ಸ್ವ -ಉದ್ಯೋಗದ ಮಾಹಿತಿ, ಸರಕಾರದ ಕಾಯಕ ಯೋಜನೆ ಮತ್ತು ಸ್ತ್ರೀಶಕ್ತಿ ಸಂಘಗಳಿಗೆ ರೂ. 5 ಲಕ್ಷದವರೆಗೆ ಶೂನ್ಯ ಬಡ್ಡಿದರದ ಸಾಲಗಳು ಮತ್ತು ಪುರುಷರ ಸ್ವ-ಸಹಾಯ ಸಂಘಗಳಿಗೆ ಶೇ.4 ರ ಬಡ್ಡಿದರದ ಸಾಲಗಳ ಬಗ್ಗೆ ಕೂಲಂಕುಷ ಮಾಹಿತಿಗಳನ್ನಿತ್ತರು. ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಮೋನಪ್ಪ ಎನ್.ಬಿ., ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ಅಧಿಕಾರಿಗಳು, ಸಂಘದ ಎಲ್ಲಾ ನಿರ್ದೇಶಕರು ಉಪಸ್ಥಿತರಿದ್ದರು.