ನಾಪೆÇೀಕ್ಲು, ಜು. 20: ನಾಪೆÇೀಕ್ಲು ಪದವಿ ಪೂರ್ವ ಕಾಲೇಜಿನ 6 ಕೊಠಡಿಗಳನ್ನು ಬೆಂಗಳೂರಿನ ಎನ್ಜಿಒ ಮೈಂಡ್ಟ್ರೀ ಎಂಬ ಐಟಿ ಕಂಪನಿ ವತಿಯಿಂದ ನವೀಕರಿಸಲಾಗಿದ್ದು, ಈ ಪ್ರಯುಕ್ತ ತಾ. 21ರಂದು (ಇಂದು) 10 ಗಂಟೆಯಿಂದ 2 ಗಂಟೆಗಳ ಕಾಲ ಕಾಲೇಜು ಕ್ಯಾಂಪಸ್ನಲ್ಲಿ ಸ್ವಚ್ಛತಾ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ.
ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಬಡ ಜನರಿಗೆ ರೂ. 2500 ಮೌಲ್ಯದ ಕಿಟ್ ವಿತರಿಸಲಾಗುತ್ತದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಸಂಸ್ಥೆ ಕೋರಿದೆ.