ಒಡೆಯನಪುರ, ಜು. 18: ಪ್ರತಿಯೊಬ್ಬರೂ ಜೀವನದಲ್ಲಿ ಸಂಸ್ಕøತಿ, ಸಂಸ್ಕಾರವನ್ನು ರೂಡಿಸಿಕೊಳ್ಳಿರಿ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕ ರವಿಪ್ರಸಾದ್ ಅಲಾಜೆ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಮಿಪದ ಮುಳ್ಳೂರು ಒಕ್ಕೂಟದ ಪ್ರಗತಿ ಸಭೆಯಲ್ಲಿ ಮಾತನಾಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಸದಸ್ಯರ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಇದರಲ್ಲಿ ಪ್ರಮುಖವಾಗಿ ಸದಸ್ಯರಲ್ಲಿ ವೈಯಕ್ತಿಕ ಸ್ವಚ್ಛತೆಯೊಂದಿಗೆ ಆರ್ಥಿಕ ವ್ಯವಹಾರದಲ್ಲಿ ಶಿಸ್ತು ಬದ್ಧತೆಯನ್ನು ಮೂಡಿಸುತ್ತದೆ ಎಂದರು. ಸಂಘದ ಸಭೆಗಳನ್ನು ನಡೆಸುವ ಸಂದರ್ಭ ಸದಸ್ಯರಲ್ಲಿ ಉತ್ತಮ ಸಂಸ್ಕøತಿ ಹಾಗೂ ಸಂಸ್ಕಾರಯುತ ಜೀವನ ರೂಡಿಸಿಕೊಳ್ಳಲು ಸಲಹೆ ನೀಡಬೇಕು. ಒಕ್ಕೂಟದ ಸಭೆಗೆ ಸರಿಯಾಗಿ ಭಾಗವಹಿಸಿ ಯೋಜನೆಯು ನೀಡುತ್ತಿ ರುವ ಸೌಲಭ್ಯಗಳನ್ನು ದೊರಕಿಸಿ ಕೊಡುವಲ್ಲಿ ಸಹಕರಿಸಬೇಕಾಗುತ್ತದೆ ಎಂದು ಹೇಳಿದರು.
ಸಂಘದ ವಾರ್ಷಿಕ ಗ್ರೇಡಿಂಗ್ ಅನ್ನು ಉಳಿಸಿಕೊಂಡಲ್ಲಿ ಪ್ರಗತಿನಿಧಿ ಯನ್ನು ಪಡೆದು ಆರ್ಥಿಕವಾಗಿ ಸದೃಢ ರಾಗಲು ಸಾಧ್ಯವಾಗುತ್ತದೆ. ಮೈಕ್ರೋಬ ಚಾತ್ ವಿಮಾ ಪಾಲಿಸಿಯನ್ನು ಮಾಡಿಸಿಕೊಂಡಲ್ಲಿ ಉಳಿತಾಯದ ಜೊತೆಯಲ್ಲಿ ಆರ್ಥಿಕ ಭದ್ರತೆಯನ್ನು ಮಾಡಿಕೊಳ್ಳ ಬಹುದೆಂದರು. ಸೌರಶಕ್ತಿಯನ್ನು ಬಳಸಿ ಬೆಳಕುಕೊಡುವ ಸೋಲಾರ್ ಘಟಕವನ್ನು ಪ್ರತಿ ಮನೆ ಯಲ್ಲೂ ಅಳವಡಿಕೆ ಮಾಡುವದರಿಂದ ವಿದ್ಯುತ್ ಬಿಲ್ ಉಳಿತಾಯವಾಗುವದ ಜೊತೆಯಲ್ಲಿ ಶಾಶ್ವತ ಬೆಳಕು ಇರುವಂತೆ ನೋಡಿಕೊಳ್ಳಬಹುದು ಎಂದರು.
ಸಂಘದ ವಾರದ ಸಭೆ ನಡೆಸುವಾಗ ನಿರ್ವಹಿಸಬೇಕಾದ ಜವಾಬ್ದಾರಿ ಕುರಿತು ಸೇವಾಪ್ರತಿನಿಧಿ ತಾರಾಲಕ್ಷ್ಮಿ ಸಭೆಯಲ್ಲಿ ಮಾಹಿತಿ ನೀಡಿದರು. ಒಕ್ಕೂಟದ ಅಧ್ಯಕ್ಷೆ ಸುನಿತ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಜವಬ್ದಾರಿ ಸಂಘದ ವರದಿಯನ್ನು ಯಶಸ್ವಿನಿ ಸಂಘದ ನೇತ್ರಾವತಿ ಮಂಡಿಸಿದರು. ಸಭೆಯಲ್ಲಿ ತರಬೇತಿ ಸಹಾಯಕಿ ಗಾನವಿ, ಅಬ್ಬೂರುಕಟ್ಟೆ ಒಕ್ಕೂಟದ ಕಾರ್ಯದರ್ಶಿ ರಮ್ಯ, ಕೋಶಾಧಿಕಾರಿ ಪಾರ್ವತಿ, ಒಕ್ಕೂಟದ ಪದಾಧಿಕಾರಿಗಳು ಸಂಘದ ಸದಸ್ಯರು ಹಾಜರಿದ್ದರು.