ಕೂಡಿಗೆ, ಜು. 18: ಕೂಡಿಗೆ ಕ್ರೀಡಾ ಪ್ರೌಢಶಾಲೆಯ ಅಥ್ಲೆಟಿಕ್ ಮೈದಾನದಲ್ಲಿ ಪೊಲೀಸ್ ನೇಮಕಾತಿಯ ದೇಹದಾಢ್ರ್ಯತೆ ಮತ್ತು ಸಹಿಷ್ಣತೆ ಪರೀಕ್ಷೆ ಪ್ರಕ್ರಿಯೆಯು ನಡೆಯಿತು.

ಇದರಲ್ಲಿ ಕೊಡಗು, ಮಂಡ್ಯ, ತುಮಕೂರು ಜಿಲ್ಲೆಯ ಅಭ್ಯರ್ಥಿಗಳು ಪಾಲ್ಗೊಂಡಿದ್ದರು.

ಸಶಸ್ತ್ರ ಮೀಸಲು ಪಡೆಯ 22 ಮತ್ತು ನಾಗರಿಕ ಪೊಲೀಸ್ 33 ಪುರುಷ ಮತ್ತು ಮಹಿಳೆ ಅಭ್ಯರ್ಥಿಗಳ ನೇಮಕಾತಿಯ ಪ್ರಕ್ರಿಯೆಯು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪಣ್ಣೇಕರ್ ಅವರ ನೇತೃತ್ವದಲ್ಲಿ ನಡೆಯಿತು.

ಓಟ, ಎತ್ತರ ಜಿಗಿತ, ಉದ್ದ ಜಿಗಿತ ಮತ್ತು ಗುಂಡು ಎಸೆತಗಳ ಪರೀಕ್ಷೆಗಳು ನಡೆದವು.

ಈ ಸಂದರ್ಭ ಸೋಮ ವಾರಪೇಟೆ ಡಿವೈಎಸ್‍ಪಿ ಮುರು ಳೀಧರ್, ಮಡಿಕೇರಿ ಡಿವೈಎಸ್‍ಪಿ ಸುಂದರ್‍ರಾಜ್, ಕೊಡಗು ಜಿಲ್ಲೆಯ ವಿವಿಧ ವೃತ್ತ ನಿರೀಕ್ಷಕರು, ಪೊಲೀಸ್ ಠಾಣಾಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು.