ಮಡಿಕೇರಿ, ಜು. 18: ಕೊಡಗು ಜಿಲ್ಲೆಯಲ್ಲಿ ವರ್ಷವಿಡೀ ಒಂದಿ ಲ್ಲೊಂದು ಕ್ರೀಡಾಕೂಟಗಳು ನಡೆಯುತ್ತಲೇ ಇರುತ್ತದೆ. ಬೇಸಿಗೆಯಲ್ಲಿ ಹಾಕಿ, ಕ್ರಿಕೆÀಟ್, ವಾಲಿಬಾಲ್, ಫುಟ್ಬಾಲ್, ಕೌಟುಂಬಿಕ ಪಂದ್ಯಾಟಗಳು ಹೀಗೆ..., ಮಳೆ ಗಾಲದಲ್ಲೂ ಕ್ರೀಡಾ ಸ್ಪರ್ಧೆಗಳಿಗೇನೂ ಕಡಿಮೆ ಇರುವದಿಲ್ಲ. ರಾಜ್ಯಮಟ್ಟದ ಕೆಸರುಗದ್ದೆ ಕ್ರೀಡಾಕೂಟ, ಆಟೋಟಗಳು, ವಾಲಿಬಾಲ್, ಫುಟ್ಬಾಲ್, ಹಗ್ಗ ಜಗ್ಗಾಟ ಹೀಗೆ..., ಈ ಸಾಲಿನಲ್ಲಿ ಇದೀಗ ಕೊಡಗು ಗೌಡ ಯುವ ವೇದಿಕೆ ವಿನೂತನ ಪ್ರಯೋಗಕ್ಕೆ ಮುಂದಾಗಿದೆ. ಕೆಸರುಗದ್ದೆಯಲ್ಲಿ ಸೌಹಾರ್ದ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಿದ್ದು, ತಾ. 28ರಂದು ಬಿಳಿಗೇರಿಯಲ್ಲಿ ಈ ಪಂದ್ಯಾವಳಿ ನಡೆಯಲಿದೆ.

ಯುವ ವೇದಿಕೆ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಅವರ ಅಧ್ಯಕ್ಷತೆಯಲ್ಲಿ ವೇದಿಕೆಯ ಕಚೇರಿ ಸಭಾಂಗಣದಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ.

ಬಿಳಿಗೇರಿಯ ತುಂತಜೆ ಚಂದ್ರಶೇಖರ್ ಅವರಿಗೆ ಸೇರಿದ ಗದ್ದೆಯಲ್ಲಿ ಪಂದ್ಯಾವಳಿ ನಡೆಯಲಿದ್ದು, 7 ಮಂದಿ ಆಟಗಾರರನ್ನೊಳಗೊಂಡ ಒಟ್ಟು 8 ತಂಡಗಳನ್ನು ಪಂದ್ಯಾವಳಿ ಯಲ್ಲಿ ಆಡಿಸುವಂತೆ ತೀರ್ಮಾ ನಿಸಲಾಗಿ ತಂಡದ ಆಯ್ಕೆ ಬಗ್ಗೆ ನಿರ್ದೇಶಕರುಗಳಿಗೆ ಜವಾಬ್ದಾರಿ ನೀಡಲಾಯಿತು. 5 ಓವರ್‍ಗಳಿಗೆ ಸೀಮಿತವಾಗಿರುವ ಪಂದ್ಯಾವಳಿಯಲ್ಲಿ ಪತ್ರಕರ್ತರ ತಂಡ ಕೂಡ ಭಾಗವಹಿಸಲಿದೆ. ತಾ. 28ರಂದು ಬೆಳಿಗ್ಗೆ 9 ಗಂಟೆಯಿಂದ ಪಂದ್ಯಾವಳಿ ಆರಂಭಗೊಳ್ಳಲಿದೆ. ಪಂದ್ಯಾವಳಿಯ ರೂಪುರೇಷೆ ಬಗ್ಗೆ ಮುಂದಿನ ಸಭೆಯಲ್ಲಿ ಚರ್ಚಿಸಿ ಅಂತಿಮ ಗೊಳಿಸುವ ಬಗ್ಗೆ ನಿರ್ಧರಿಸಲಾಯಿತು.

ಇನ್ನುಳಿದಂತೆ ವೇದಿಕೆಯ ಮಹಾಸಭೆ ನಡೆಸುವ ಬಗ್ಗೆ ಹಾಗೂ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಕೈಲ್‍ಮುಹೂರ್ತ ಸಂತೋಷಕೂಟ ಏರ್ಪಡಿಸುವ ಬಗ್ಗೆ ಚರ್ಚಿಸಲಾಯಿತು.

ಸಭೆಯಲ್ಲಿ ವೇದಿಕೆ ಕಾರ್ಯದರ್ಶಿ ಕಟ್ಟೆಮನೆ ರೋಶನ್, ಖಜಾಂಚಿ ನೈಯ್ಯಣಿ ಸಂಜು, ಉಪಾಧ್ಯಕ್ಷ ಪಾಣತ್ತಲೆ ಜಗದೀಶ್, ಕ್ರೀಡಾ ಸಮಿತಿ ಅಧ್ಯಕ್ಷ ಬಾಳಾಡಿ ಮನೋಜ್, ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಕುಕ್ಕೇರ ಲಕ್ಷ್ಮಣ, ಶಿಸ್ತು ಸಮಿತಿ ಅಧ್ಯಕ್ಷ ಪೊಕ್ಕಳಂಡ್ರ ಮನೋಜ್, ಕ್ರಿಕೆಟ್ ಪಂದ್ಯಾವಳಿ ಸಂಚಾಲಕ ಕುಟ್ಟನ ಪ್ರಶಾಂತ್, ಹಿರಿಯ ಸಲಹೆಗಾರ ಯಾಲದಾಳು ಹರೀಶ್, ನಿರ್ದೇಶಕರು ಗಳು, ಹಲವು ಸಲಹೆ - ಸೂಚನೆ ನೀಡಿದರು ಎಂದು ಪ್ರಚಾರ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ.