ಮಡಿಕೇರಿ, ಜು.17: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ತಾ.21ರಂದು ಮುತ್ತಾರುಮುಡಿ ಗ್ರಾಮದಲ್ಲಿ ‘ಅರೆಬಾಷೆÉ ಸಂಸ್ಕøತಿ ಜನಪದ ಹಬ್ಬ’ ಕಾರ್ಯಕ್ರಮ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಕಾಡೆಮಿಯ ಅಧ್ಯಕ್ಷ ಪಿ.ಸಿ.ಜಯರಾಮ ಅವರು, ಮುತ್ತಾರುಮುಡಿ ಗ್ರಾಮಸ್ಥರು, ಭಗವತಿ ಯುವಕ ಸಂಘ, ಭಗವತಿ ಮಹಿಳಾ ಮಂಡಳಿ ಸಹಕಾರದಲ್ಲಿ ದಿನವಿಡೀ ನಡೆಯುವ ಕಾರ್ಯಕ್ರಮದಲ್ಲಿ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಕುರಿತ ಉಪನ್ಯಾಸ, ಸಾಧಕರಿಗೆ ಸನ್ಮಾನ, ಅರೆಭಾಷೆ ಸಂಸ್ಕøತಿಗೆ ಸಂಬಂಧಿಸಿದಂತೆ ವಿವಿಧ ಸ್ಪರ್ಧೆಗಳು, ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ ಎಂದು ಹೇಳಿದರು.ಅಂದು ಪೂರ್ವಾಹ್ನ 9.30 ಗಂಟೆಗೆ ಮುತ್ತಾರುಮುಡಿ ಶಾಲಾ ಆಟದ ಮೈದಾನದಲ್ಲಿ ಆರಂಭ ವಾಗಲಿರುವ ಕಾರ್ಯುಕ್ರಮದಲ್ಲಿ ಕಾಂತೂರು-ಮೂರ್ನಾಡು ಗ್ರಾ.ಪಂ. ಅಧ್ಯಕ್ಷೆ ಕಲ್ಲುಮುಟ್ಲು ಜಮುನಾ ಅವರು ವಸ್ತುಪ್ರದರ್ಶನ ಉದ್ಘಾಟಿಸಲಿದ್ದು, ಗ್ರಾಮದ ಹಿರಿಯರಾದ ಪಾರೆಮಜಲು ಗಂಗಮ್ಮ ದೇವಯ್ಯ ಅವರು ಕಾರ್ಯ ಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮಡಿಕೇರಿ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಜಿ.ಪಂ.
ಮಾಜಿ ಅಧ್ಯಕ್ಷೆ
(ಮೊದಲ ಪುಟದಿಂದ) ದೀರ್ಘಕೇಶಿ ಶಿವಣ್ಣ, ಭಗವತಿ ಯುವಕ ಸಂಘದ ಅಧ್ಯಕ್ಷ ಹಾಗೂ ಗ್ರಾ.ಪಂ. ಸದಸ್ಯ ಪಾರೆಮಜಲು ರಾಜೇಶ್ಕುಮಾರ್, ಯುವತಿ ಮಂಡಳಿ ಅಧ್ಯಕ್ಷೆ ಬಿಳಿಯಾರ ನೀತು ಮಂದಣ್ಣ, ಗ್ರಾ.ಪಂ. ಸದಸ್ಯೆ ರಾಣಿ ಪಿ.ಎಸ್, ಮೂರ್ನಾಡು ಗೌಡ ಸಮಾಜದ ಅಧ್ಯಕ್ಷ ಚೆಟ್ಟಿಮಾಡ ಕಾರ್ಯಪ್ಪ, ನಿವೃತ್ತ ಪ್ರಾಧ್ಯಾಪಕಿ ಹಾಗೂ ಸಾಹಿತಿ ಪ್ರೊ. ದಂಬೆಕೋಡಿ ಸುಶೀಲಾ ಸುಬ್ರಮಣಿ, ಅಕಾಡೆಮಿಯ ಮಾಜಿ ಸದಸ್ಯೆ ಹಾಗೂ ಮಡಿಕೇರಿ ಸರಕಾರಿ ಮಹಿಳಾ ಪದವಿ ಕಾಲೇಜು ಪ್ರಾಧ್ಯಾಪಕಿ ಡಾ.ಕೋರನ ಸರಸ್ವತಿ ಪ್ರಕಾಶ್ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಎಂಬ ವಿಷಯದ ಕುರಿತು ನಿವೃತ್ತ ಶಿಕ್ಷಕಿ ಪಾರೆಮಜಲು ವಿಶಾಲಾಕ್ಷಿ ಪುಟ್ಟಯ್ಯ ಅವರು ಉಪನ್ಯಾಸ ನೀಡಲಿದ್ದಾರೆ ಎಂದು ವಿವರಿಸಿದರು.
ಸಾಧಕರಿಗೆ ಸನ್ಮಾನ: ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 11 ಮಂದಿಯನ್ನು ಸನ್ಮಾನಿಸಲಾಗುತ್ತಿದ್ದು, ಅದರಂತೆ ಕೋಡಿ ನೀಲಮ್ಮ (ನಾಟಿವೈದ್ಯ-ಜನಪದ ಸೇವೆ), ಬೈಲೇರ ಮೋಟಯ್ಯ (ಅರೆಭಾಷೆ ಸಂಸ್ಕøತಿ ಸೇವೆ), ಪಾರೆಮಜಲು ಕೇಶವಯ್ಯ (ಕ್ರೀಡೆ-ಕೃಷಿ), ಬಿಳಿಯಾರ ದೇವಯ್ಯ (ಜನಪದ-ಸಂಸ್ಕøತಿ ಸೇವೆ), ಪಾರೆಮಜಲು ದೇವಮ್ಮ ಅಪ್ಪಯ್ಯ (ಸಾಂಸ್ಕøತಿಕ ಸೇವೆ) ತೆಕ್ಕಡೆ ಬಸಪ್ಪ (ನಿವೃತ್ತ ಹಿರಿಯ ಯೋಧ), ಪಾರೆಮಜಲು ಡಾಲಿ (ನಿವೃತ್ತ ಹಿರಿಯ ಯೋಧ) ಮೇರ್ಕಜೆ ಉಮೇಶ್ (ಕೃಷಿ-ಜನಪದಕಲೆ-ನಾಟಿ ವೈದ್ಯ ಸೇವೆ) ತೆಕ್ಕಡೆ ಕುಮಾರಸ್ವಾಮಿ (ಸಾಹಿತ್ಯ-ಕಲೆ ಸೇವೆ) ಹಾಗೂ ಪಾರೆಮಜಲು ಕುಸುಮ ಕಾರ್ಯಪ್ಪ (ಕ್ರೀಡೆ-ಕಲಾ ಸೇವೆ) ಅವರುಗಳು ಸನ್ಮಾನಕ್ಕೆ ಭಾಜನರಾಗಿದ್ದಾರೆ ಎಂದರು.
ಕಾರ್ಯಕ್ರಮದ ಅಂಗವಾಗಿ ಮಧ್ಯಾಹ್ನ 12ರಿಂದ ಸಂಜೆ 4ಗಂಟೆಯವರೆಗೆ ಅರೆಭಾಷೆ ಸಂಸ್ಕøತಿಗೆ ಸಂಬಂಧಿಸಿದ ಛದ್ಮವೇಷ, ಪಾರೆಮಜಲು ರೀತಾ ಸುದರ್ಶನ್ ಮತ್ತು ತಂಡದವರಿಂದ ಸ್ವಾಗತ ನೃತ್ಯ, ಸಾರ್ವಜನಿಕರಿಗೆ ಏಕಪಾತ್ರ ಅಭಿನಯ, ತೆಕ್ಕಡೆ ಭೀಮಯ್ಯ ಮತ್ತು ತೆಕ್ಕಡೆ ಕುಮಾರಸ್ವಾಮಿ ತಂಡದವರಿಂದ ಹರಿಸೇವೆ ಸಾಂಸ್ಕøತಿಕ ಕಾರ್ಯಕ್ರಮ ಜರುಗಲಿದೆ. ಮಧ್ಯಾಹ್ನ ಊಟದ ಬಳಿಕ ಪಾರೆಮಜಲು ದೇವಮ್ಮ ಅಪ್ಪಯ್ಯ ಮತ್ತು ತಂಡದವರಿಂದ ಹಾಗೂ ತೆಕ್ಕಡೆ ನೇತ್ರಾವತಿ ಕುಮಾರಸ್ವಾಮಿ ಮತ್ತು ತಂಡದವರಿಂದ ಸೋಬಾನೆ, ಮೇರ್ಕಜೆ ಲೋಹಿತ್ ಮತ್ತು ಗೀತಾ ಲೋಹಿತ್ ತಂಡದಿಂದ ಮದುವೆ ಕಾರ್ಯಕ್ರಮ, ಕೊಡೆಕಲ್ಲು ಬಿಂದು ಹರೀಶ್ ಮತ್ತು ತಂಡದಿಂದ ಕೋಲಾಟ ನಡೆಯಲಿದೆ.
ಪಾರೆಮಜಲು ಮೋಕ್ಷ ರಾಜೇಶ್ ಮತ್ತು ತಂಡದವರಿಂದ ಮಕ್ಕಳ ಜಾನಪದ ಕೃಷಿ ನೃತ್ಯ, ಸಾರ್ವಜನಿಕರಿಗೆ ತಪ್ಪಿಲ್ಲದಂತೆ ಅರೆಭಾಷೆ ಮಾತನಾಡುವದು, ಅರೆಭಾಷೆ ಕವನ ವಾಚನ, ಅರೆಭಾಷೆ ಹಾಡು, ಒಗಟು ಬಿಡಿಸುವದು, ಅರೆಭಾಷೆ ರಸಪ್ರಶ್ನೆ (ಇಬ್ಬರ ತಂಡ), ಬಿಳಿಯಾರ ಸುಶ್ಮಿತಾ ಮಂದಣ್ನ ಮತ್ತು ತಂಡ ಹಾಗೂ ದೇರಜೆ ಸುಜನ್ಯ ಮತ್ತು ತಂಡದರಿಗೆ ಅರೆಭಾಷೆ ಜಾನಪದ ನೃತ್ಯ, ಪಾರೆಮಜಲು ರಾಜೇಶ್ ಕುಮಾರ್ ಮತ್ತು ತಂಡದವರಿಂದ ಕೋಲಾಟ, ಗ್ರಾಮಸ್ಥರಿಂದ ನಾಡ್ ಮದ್ದ್ ಪರಿಚಯ, ದೇರಜೆ ಬೋಪಣ್ಣ ಮತ್ತು ತಂಡದವರಿಂದ ಹುತ್ತರಿ ಕದಿರು ಕುಯ್ಯುವದು, ಕುಳಿತಲ್ಲೇ ಬರೆದು ವೇದಿಕೆಯಲ್ಲಿ ಗಾದೆ ಮಾತು ಓದುವದು, ಪಾರೆಮಜಲು ಕೋಮಲ ರಾಜೇಶ್ ಮತ್ತು ತಂಡದವರಿಂದ ಸುಗ್ಗಿ ಸುವ್ವಾಲಿ ಕುಣಿತ, ತೆಕ್ಕಡೆ ಸೋನಾಲಿ ಮತ್ತು ತಂಡದವರಿಂದ ಮಕ್ಕಳ ನೃತ್ಯ, ವಾದ್ಯ ಕುಣಿತ (ಎಲ್ಲರಿಗೂ) ಮುಂತಾದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿರುವದಾಗಿ ಜಯರಾಮ ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಅಕಾಡೆಮಿಯ ರಿಜಿಸ್ಟ್ರಾರ್ ಬಿ.ಚಂದ್ರಹಾಸ ರೈ, ಸದಸ್ಯರು ಹಾಗೂ ಕಾರ್ಯಕ್ರಮ ಸಂಚಾಲಕರಾದ ಕಡ್ಲೇರ ತುಳಸಿ ಮೋಹನ್, ಕಾನೆಹಿತ್ಲು ಮೊಣ್ಣಪ್ಪ, ಸದಸ್ಯ ಬಾರಿಯಂಡ ಜೋಯಪ್ಪ ಹಾಗೂ ಭಗವತಿ ಯುವಕ ಮಂಡಳಿ ಅಧ್ಯಕ್ಷ ಪಾರೆಮಜಲು ರಾಜೇಶ್ ಕುಮಾರ್ ಉಪಸ್ಥಿತರಿದ್ದರು.