ಸೋಮವಾರಪೇಟೆ, ಜು. 18: ಮೀನುಗಾರಿಕಾ ಇಲಾಖೆ ವತಿಯಿಂದ ತಾಲೂಕಿನ ರೈತರಿಗೆ ಮೀನು ಮರಿಗಳನ್ನು ವಿತರಿಸಲಾಯಿತು. ಕಲ್ಕಂದೂರಿನಲ್ಲಿರುವ ಮೀನುಗಾರಿಕಾ ಕಚೇರಿ ಆವರಣದಲ್ಲಿ ಕಾಟ್ಲಾ, ರೋಹು, ಸಾಮಾನ್ಯ ಗೆಂಡೆ ತಳಿಯ ಮೀನುಮರಿಗಳನ್ನು ರೈತರಿಗೆ ವಿತರಿಸಲಾಯಿತು.
ಜಿ.ಪಂ. ಕೃಷಿ ಸ್ಥಾಯಿ ಸಮಿತಿಯ ಅಧ್ಯಕ್ಷೆ ಸರೋಜಮ್ಮ, ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್, ಸದಸ್ಯೆ ತಂಗಮ್ಮ ಅವರುಗಳು ಭಾಗವಹಿಸಿ ರೈತರಿಗೆ ಮೀನುಮರಿಗಳನ್ನು ವಿತರಿಸಿದರು. ಮೀನುಮರಿಗಳ ಬಿತ್ತನೆ ಅವಧಿ ಪ್ರಾರಂಭವಾಗಿದ್ದು ರೈತರು ಮೀನುಮರಿಗಳಿಗೆ ಬೇಡಿಕೆ ಸಲ್ಲಿಸಬಹುದಾಗಿದೆ ಎಂದು ಮೀನುಗಾರಿಕೆ ಸಹಾಯಕ ನಿರ್ದೇಶಕಿ ಮಿಲನಾ ಭರತ್ ತಿಳಿಸಿದರು.