ಮಡಿಕೇರಿ, ಜು. 17: ಕ್ಯಾನ್ಸರ್ ಕುರಿತು ಆರೋಗ್ಯ ಜಾಗೃತಿ ಸಂದೇಶ ಸಾರುತ್ತಾ ಭಾರತದಾದ್ಯಂತ ಸಾವಿರಾರು ಕಿ.ಮೀ.ಗಳನ್ನು ಬ್ಯಾಟರಿ ಚಾಲಿತ ವಾಹನದಲ್ಲಿ ಸಂಚರಿಸಿ ಗಿನ್ನೀಸ್ ದಾಖಲೆ ಮಾಡಿರುವ ತೆಲಂಗಾಣ ಮೂಲದ ಕೃಷ್ಣರೆಡ್ಡಿ ಅವರನ್ನು ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ದೇಶ ಪರ್ಯಟನೆ ಮಾಡುತ್ತಾ ಕೊಡಗಿಗೆ ಭೇಟಿ ನೀಡಿದ್ದ ತೆಲಂಗಾಣದ ಸರ್ಕಾರಿ ಆಸ್ಪತ್ರೆಯ ಅಧಿಕಾರಿ ಎಂ.ವಿ. .ಕೃಷ್ಣರೆಡ್ಡಿ ಈಗಾಗಲೇ ಗಿನ್ನೀಸ್ ದಾಖಲೆಯನ್ನು ಬ್ಯಾಟರಿ ಕಾರಿನಲ್ಲಿ ಕಡಿಮೆ ದಿನಗಳಲಿ ್ಲಅತ್ಯಧಿಕ ಕಿ.ಮೀ. ಕ್ರಮಿಸಿದಕ್ಕಾಗಿ ದಾಖಲಿಸಿದ್ದು ,ಮಡಿಕೇರಿಯ ಮಿಸ್ಟಿಹಿಲ್ಸ್ ವತಿಯಿಂದ ರೋಟರಿ ಸಭಾಂಗಣದಲ್ಲಿ ಈ ಸಾಧಕನನ್ನು ರೋಟರಿ ವಲಯ ಕಾರ್ಯದರ್ಶಿ ಅನಿಲ್ ಎಚ್.ಟಿ. ಮತ್ತು ವಲಯ ಯೋಜನಾ ಸಮಿತಿ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ಸನ್ಮಾನಿಸಿ ಗೌರವಿಸಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಕೃಷ್ಣರೆಡ್ಡಿ, ದೇಶದಾದ್ಯಂತ ನಗರ ಪ್ರದೇಶಗಳು ಬೆಳೆಯುತ್ತಿರುವಂತೆಯೇ ಕ್ಯಾನ್ಸರ್‍ನಂತಹ ಮಾರಕ ರೋಗ ಪ್ರಕರಣಗಳೂ ಹೆಚ್ಚುತ್ತಿವೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಉಂಟಾಗುತ್ತಿರುವ ಮಾಲಿನ್ಯವನ್ನು ಪರಿಣಾಮಕಾರಿಯಾಗಿ ತಡೆಗಟ್ಟಬೇಕಾದ ಅಗತ್ಯವಿದ್ದು ಇಲ್ಲದೇ ಹೋದಲ್ಲಿ ಮಾರಕ ರೋಗಗಳಿಗೆ ಬಲಿಯಾಗುವವರ ಸಂಖ್ಯೆ ಹೆಚ್ಚಾದೀತು ಎಂದು ಎಚ್ಚರಿಸಿದರು.

ಮಾಲಿನ್ಯದಿಂದ ಉಂಟಾಗುತ್ತಿರುವ ರೋಗರುಜಿನದ ಬಗ್ಗೆ ತಾನು ಮನೆಯಲ್ಲಿ ಸಾಕಷ್ಟು ಚರ್ಚೆ ನಡೆಸುತ್ತಿದ್ದ ಸಂದರ್ಭ ತನ್ನ ತಾಯಿ ಸರೋಜಮ್ಮ, ಇದನ್ನೆಲಾ ್ಲಮನೆಯಲ್ಲಿ ಹೇಳಿದರೆ ಸಾಲದು. ಊರೂರು ತಿರುಗಿ ಜನರಲ್ಲಿ ಜಾಗೃತಿ ಉಂಟು ಮಾಡು ಎಂದು ಪ್ರೇರೇಪಿಸಿದರು. ಹೀಗಾಗಿಯೇ ತನ್ನ ಮಗನೊಂದಿಗೆ ಸೇರಿ ತಾನು ತಯಾರಿಸಿದ ಬ್ಯಾಟರಿ ಚಾಲಿತ ಕಾರಿನಲ್ಲಿ ದೇಶ ಪರ್ಯಟನೆಗೆ ಮುಂದಾದೆ ಎಂದು ಹೇಳಿದಕೃಷ್ಣರೆಡ್ಡಿ, ಈವರೆಗೆ ಲಂಡನ್‍ನ ವ್ಯಕ್ತಿಯೋರ್ವರು 23 ದಿನಗಳಲ್ಲಿ 1333 ಕಿ.ಮೀ. ಕ್ರಮಿಸಿ ಗಿನ್ನೀಸ್ ದಾಖಲೆ ಮಾಡಿದ್ದರು. ಆದರೆ ತಾನು ಕೇವಲ 9 ದಿನಗಳಲ್ಲಿ 1665 ಕಿ.ಮೀ.ಯನ್ನು ಕ್ರಮಿಸಿ ಹಳೇದಾಖಲೆ ಮುರಿದಿದ್ದಾಗಿ ಕೃಷ್ಣರೆಡ್ಡಿ ವಿಶ್ವದಾಖಲೆ ಬಗ್ಗೆ ಮಾಹಿತಿ ನೀಡಿದರು.

ಕಾವೇರಿ ತವರು ಜಿಲ್ಲೆಯಾದ ಕೊಡಗಿಗೆ ಭೇಟಿ ನೀಡಿರುವದು ಸಂತೋಷ ತಂದಿದೆ. ಈ ಜಿಲ್ಲೆಯಲ್ಲಿ ಶುದ್ದ ಗಾಳಿಯ ಸೇವನೆಯಿಂದಾಗಿ ಜಿಲ್ಲೆಯ ಜನತೆಯ ಆರೋಗ್ಯ ಸುಸ್ಥಿತಿಯಿಂದ ಕೂಡಿದೆ ಎಂಬದು ಮನದಟ್ಟಾಯಿತು ಎಂದು ಅಭಿಪ್ರಾಯಪಟ್ಟರು.

ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಎಂ.ಆರ್. ಜಗದೀಶ್ ಮಾತನಾಡಿ, ಪರಿಸರಕ್ಕೆ ಮಾಲಿನ್ಯದಂತಹ ವಾಹನಗಳ ಬಳಕೆ ಬಗ್ಗೆ ಸಂದೇಶವನ್ನೂ ಕೃಷ್ಣ ರೆಡ್ಡಿ ಬ್ಯಾಟರಿ ಕಾರಿನ ಮೂಲಕ ಸಾರಿದ್ದು, ಮುಂದಿನ ದಿನಗಳಲ್ಲಿ ಇಂಥ ವಾಹನಗಳೇ ಸಂಚಾರಕೆ ್ಕಅನಿವಾರ್ಯವಾಗುವ ದಿನಗಳೂ ಬಂದೀತು ಎಂದು ಮಾರ್ಮಿಕವಾಗಿ ನುಡಿದರು.

ರೋಟರಿ ಮಿಸ್ಟಿಹಿಲ್ಸ್ ಕಾರ್ಯದರ್ಶಿ ಪ್ರಮೋದ್‍ಕುಮಾರ್ ರೈ, ಖಜಾಂಚಿ ಪ್ರಸಾದ್‍ಗೌಡ, ಲೀನಾ ಪೂವಯ್ಯ, ಪ್ರಿಯ ಕೃಷ್ಣರೆಡ್ಡಿ ಕಾರ್ಯಕ್ರಮದಲ್ಲಿ ಹಾಜರಿದ್ದರು.