ವೀರಾಜಪೇಟೆ, ಜೂ. 17: ಕಾವೇರಿ ಹೊಳೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿರುವ ಪ್ರಕರಣವು ವೀರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಬೇತ್ರಿಯ ಕಾವೇರಿ ಹೊಳೆಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಇಂದು ಬೆಳಿಗ್ಗೆ ಬೇತ್ರಿ ಸೇತುವೆಯ ಅನತಿ ದೂರದಲ್ಲಿ ಹೊಳೆಯ ಅಂಚಿನಲ್ಲಿ ಅಂಗಾತವಾಗಿ ನೀರಿನಲ್ಲಿ ತೇಲುತಿದ್ದ ಶವವು ಸ್ಥಳೀಯರಿಗೆ ಗೋಚರಿಸಿದೆ. ವಿಷಯ ತಿಳಿದು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಅಗಮಿಸಿದ್ದಾರೆ. ಮುಳುಗು ತಜ್ಞ ಸಿದ್ದಲಿಂಗ ಸ್ವಾಮಿ ಅವರ ನೆರವಿನಿಂದ ಶವವನ್ನು ದಡಕ್ಕೆ ತಲಪಿಸಿದ್ದಾರೆ. ಸ್ಥಳ ಮಹಜರು ಮಾಡಿರುವ ಪೊಲೀಸರು ಸುಮಾರು 45 ಪ್ರಾಯವಿರಬಹುದು ಎಂದು ಅಂದಾಜಿಸಲಾಗಿದೆ. ಗುರುತು ಪತ್ತೆಯಾಗದ ಶವವನ್ನು ವೀರಾಜಪೇಟೆ ಸರ್ಕಾರಿ ಅಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.