ಸೋಮವಾರಪೇಟೆ, ಜು. 16: ವಿವಿಧ ದಲಿತಪರ ಸಂಘಟನೆಗಳ ಪ್ರಮುಖರನ್ನು ಒಳಗೊಂಡಂತೆ ನೂತನವಾಗಿ ಜಿಲ್ಲಾ ದಲಿತ ಹಿತರಕ್ಷಣಾ ಒಕ್ಕೂಟ ರಚಿಸಲಾಗಿದ್ದು, ಅಧ್ಯಕ್ಷರಾಗಿ ಡಿ.ಎಸ್. ನಿರ್ವಾಣಪ್ಪ ಆಯ್ಕೆ ಯಾಗಿದ್ದಾರೆ. ಒಕ್ಕೂಟದ ಪ್ರಧಾನ ಕಾರ್ಯದರ್ಶಿಯನ್ನಾಗಿ ಜೆ.ಆರ್. ಪಾಲಾಕ್ಷ, ಗೌರವಾಧ್ಯಕ್ಷರುಗಳಾಗಿ ಹೆಚ್.ಜೆ. ಹನುಮಯ್ಯ, ಜಯಪ್ಪ ಹಾನಗಲ್ಲು, ಹೆಚ್.ಬಿ. ಜಯಮ್ಮ, ಉಪಾಧ್ಯಕ್ಷರುಗಳಾಗಿ ಎಂ.ಎನ್. ರಾಜಪ್ಪ, ಸೋಮಪ್ಪ, ಕೆ.ಬಿ. ರಾಜು, ಹೊನ್ನಪ್ಪ, ಪರಶುರಾಮ, ಸಹ ಕಾರ್ಯದರ್ಶಿಯಾಗಿ ಬಿ.ಈ. ಜಯೇಂದ್ರ, ಖಜಾಂಚಿಯಾಗಿ ಹೆಚ್.ಎ. ನಾಗರಾಜು ಅವರುಗಳನ್ನು ನೇಮಕ ಮಾಡಲಾಗಿದೆ. ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ರಾಮಕೃಷ್ಣ, ಸಣ್ಣಪ್ಪ, ಎಸ್.ಆರ್. ಮಂಜುನಾಥ್, ಬಿ.ಆರ್. ರಾಜು, ಎಲ್.ಎಂ. ನಾಗರಾಜು ಅವರುಗಳನ್ನು ಆಯ್ಕೆ ಮಾಡಲಾಗಿದೆ.