ವೀರಾಜಪೇಟೆ, ಜು. 16: ವೈಸ್‍ನೆಮ್ ಕ್ಲಬ್ ಗೋಣಿಕೊಪ್ಪ ವತಿಯಿಂದ ವೀರಾಜಪೇಟೆಗೆ ಸಮೀಪದ ಕೆದಮುಳ್ಳೂರು ಗ್ರಾಮದ ಸೈಂಟ್ ಮೇರೀಸ್ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ್, ಪುಸ್ತಕಗಳನ್ನು ಒಳಗೊಂಡ ಶೈಕ್ಷಣಿಕ ಉಪಕರಣಗಳನ್ನು ಉಚಿತವಾಗಿ ವಿತರಿಸಲಾಯಿತು.
ಶಾಲಾ ಮುಖ್ಯಸ್ಥೆ ಸಿಸ್ಟರ್ ಮೇರಿ, ವೈಸ್‍ಮೆನ್ ಕ್ಲಬ್ ಅಧ್ಯಕ್ಷ ಬಿ. ರತ್ನಾಕರ ಶೆಟ್ಟಿ, ಕಾರ್ಯದರ್ಶಿ ಆಂಟನಿರಾಬಿನ್, ಕೋಶಾಧಿಕಾರಿ ಕೆ.ಪಿ. ರಶೀದ್, ಪದಾಧಿಕಾರಿಗಳಾದ ಎ.ಸಿ. ಚೋಪ್ಪಿ, ಅನಿತಾ ಡಿಸೋಜ ಉಪಸ್ಥಿತರಿದ್ದರು.