ಕುಶಾಲನಗರ, ಜು. 16: ಮಾಹಿತಿ ಹಕ್ಕು 2005 ರ ನಿಯಮದಡಿ ಅರ್ಜಿ ಸಲ್ಲಿಸಿದ ವ್ಯಕ್ತಿಗಳ ಮೇಲೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಮಾಲೀಕ ಅಬ್ದುಲ್ ಸಲಾಂ ಮತ್ತು ಕೆಲವು ವರ್ತಕರು ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಗೆ ಮನವಿ ಸಲ್ಲಿಸಿದರು. ಕುಶಾಲನಗರ ಸುದ್ದಿ ಸೆಂಟರ್ ಮಾಧ್ಯಮ ಸಂಸ್ಥೆ ಮೂಲಕ ನಿಸರ್ಗಧಾಮ ಟೂರಿಸ್ಟ್ ಸೆಂಟರ್ ಬಗ್ಗೆ ಮಾಹಿತಿ ಹಕ್ಕು ನಿಯಮದಡಿ ದಾಖಲೆ ಒದಗಿಸಲು ಹಲವು ಇಲಾಖೆಗಳಿಗೆ ಕೋರಲಾಗಿತ್ತು.

ಇದನ್ನು ಖಂಡಿಸಿ ಅಬ್ದುಲ್ ಸಲಾಂ ಮತ್ತು ಸಹಚರರು ಭಿತ್ತಿ ಪತ್ರಗಳನ್ನು ಹಿಡಿದು ಕುಶಾಲನಗರ ಪಪಂ ಮುಂಭಾಗ ಕೆಲಕಾಲ ನಿಂತು ನಂತರ ಮುಖ್ಯಾಧಿಕಾರಿ ಸುಜಯ್‍ಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ತಮ್ಮ ಸಂಸ್ಥೆಯ ಮಾಹಿತಿಯನ್ನು ಪಡೆದು ದುರುಪಯೋಗ ಪಡಿಸುವ ಸಾಧ್ಯತೆಯಿದೆ ಎಂದು ದೂರಿರುವ ಸಲಾಂ ಸುದ್ದಿ ಸೆಂಟರ್ ಸಂಸ್ಥೆ ಮೇಲೆ ಕ್ರಮಕೈಗೊಳ್ಳಬೇಕೆಂದು ಮನವಿಯಲ್ಲಿ ಕೋರಿದ್ದಾರೆ.