ಗೋಣಿಕೊಪ್ಪ ವರದಿ, ಜು. 16: ಪೊನ್ನಂಪೇಟೆ ಗ್ರಾಮ ಪಂಚಾಯಿತಿಯಲ್ಲಿ ಸೇವೆ ಸಲ್ಲಿಸಿ ಮುಂಬಡ್ತಿ ಹೊಂದಿದ ಇಬ್ಬರು ಸಿಬ್ಬಂದಿಗೆ ಬೀಳ್ಕೊಡುಗೆ ನೀಡಲಾಯಿತು. 20 ವರ್ಷಗಳಿಂದ ಗುಮಾಸ್ತ ಹಾಗೂ ಕರವಸೂಲಿಗಾರರಾಗಿ ಸೇವೆ ಸಲ್ಲಿಸಿ ಕಾರ್ಯದರ್ಶಿಯಾಗಿ ಮುಂಬಡ್ತಿ ಹೊಂದಿರುವ ಪೊಕ್ಕಳಿಚಂಡ ಪಿ. ಗಣಪತಿ ಮತ್ತು ಸಿ.ಜಿ. ಚಂದ್ರಶೇಖರ್ ಬೀಳ್ಕೊಡುಗೆ ಸ್ವೀಕರಿಸಿದರು. ಈ ಸಂದರ್ಭ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸಮಿತಾ ಗಣೇಶ್, ಉಪಾಧ್ಯಕ್ಷೆ ಮಂಜುಳಾ, ಪಿಡಿಓ ಪುಟ್ಟರಾಜು ಹಾಗೂ ಸದಸ್ಯರುಗಳು ಪಾಲ್ಗೊಂಡಿದ್ದರು.