ವೀರಾಜಪೇಟೆ, ಜು. 15: ಪ್ರತಿಯೊಬ್ಬರ ಬದುಕಿನಲ್ಲಿ ಶಾಂತಿ ನೆಮ್ಮದಿ ಸಂತೋಷದಿಂದಿರಲು ಜೀವನದಲ್ಲಿ ಸಾಧ್ಯವಾದಷ್ಟು ಧಾರ್ಮಿಕವಾಗಿ ಸಮಾಜ ಸೇವೆ ಹಾಗೂ ದೇವರ ಸ್ಮರಣೆ ಮಾಡುವ ಮೂಲಕ ಸುಂದರ ಸಮಾಜ ನಿರ್ಮಾಣವಾಗಲು ಸಾಧ್ಯವಾಗುತ್ತದೆ ಎಂದು ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮಿ ಹೇಳಿದರು.
ವೀರಾಜಪೇಟೆ ಜೈನರ ಬೀದಿಯಲ್ಲಿರುವ ಶತಮಾನಗಳ ಇತಿಹಾಸವಿರುವ ಬಸವೇಶ್ವರ ದೇವಾಲಯದ ನೂತನ ಮಹಾದ್ವಾರ ಉದ್ಘಾಟಿಸಿ ಸಭೆಯನ್ನುದ್ದೇಶಿಸಿ ಮಾತನಾಡಿ ವೀರಾಜಪೇಟೆಯಲ್ಲಿ ವೀರಾರಾಜೇಂದ್ರ ಆಳಿದ ಸಂದರ್ಭ ಸ್ಥಾಪನೆಗೊಂಡ ಬಸವೇಶ್ವರ ದೇವಾಲಯದಲ್ಲಿ ಎರಡು ಶತಮಾನಗಳಿಂದಲೂ ಗೋಪಾಲಕೃಷ್ಣ ಕಾಮತ್ ಹಾಗೂ ರವಿಂದ್ರನಾಥ್ ಕಾಮತ್ ಅವರ ಕುಟುಂಬದವರು ಪೂಜಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದು ಈಗ ಮಹಾದ್ವಾರ ಲೋಕಾರ್ಪಣೆ ಗೊಂಡಿದೆ. ಮನುಷ್ಯನ ಬದುಕಿನಲ್ಲಿ ಅಜ್ಞಾನ, ಅಹಂಕಾರ, ಮನಸ್ಸಿನಲ್ಲಿರುವ ಮೈಲಿಗೆಯನ್ನು ತೊಳೆದು ಹಾಕಲು ಭಗವಂತನ ಧ್ಯಾನದ ಮೂಲಕ ಸಾಧ್ಯ ಕೇವಲ ಬೋಧನೆಗಿಂತಲೂ ಸುಸಂಸ್ಕøತ ಸಮಾಜ ಸೇವೆಯನ್ನು ಜೀವನದಲ್ಲಿ ಅಳವಡಿಸಿಕೊಂಡು ಆಧ್ಯಾತ್ಮಿPತೆಯÀ ಮನಃಶುದ್ಧಿಯಿಂದ ಸಮಾಜಸೇವೆ ಮಾಡುವಂತಾಗಬೇಕು. ಬಡತನವನ್ನು ಹೋಗಲಾಡಿಸಬಹುದು ಆದರೆ ದಾರಿದ್ರ್ಯವನ್ನು ಹೋಗಲಾಡಿಸಲು ಆಧ್ಯಾತ್ಮಿಕತೆ ಅಗತ್ಯ. ಎಂದರು.
ದೇವಾಲಯಕ್ಕೆ ಮಹಾದ್ವಾರವನ್ನು ಉದಾರವಾಗಿ ಕೊಡುಗೆ ನೀಡಿದ ದಕ್ಷಿಣ ಕನ್ನಡ ಜಿಲ್ಲೆಯ ಮಣಿಕ್ಕಾರ ಲಕ್ಷ್ಮೀ ಶ್ಯಾನು ಭೋಗ ಸ್ಮರಣಾರ್ಥ ಅವರ ಪತಿ ಎಂ. ಗೋಪಾಲಕೃಷ್ಣ ಶ್ಯಾನು ಭೋಗ ಅವರನ್ನು ಬಸವೇಶ್ವರ ದೇವಾಲಯ ಸಮಿತಿಯಿಂದ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿದ ಗೋಪಾಲಕೃಷ್ಣ ಶ್ಯಾನುಭೋಗ ಅವರು ಮಾತನಾಡಿ ಕಳೆದ 2018ರಲ್ಲಿ ವೀರಾಜಪೇಟೆಗೆ ಬಂದಾಗ ದೇವಾಸ್ಥಾನದ ಮಹದ್ವಾರ ಶಿಥಿಲಗೊಂಡಿರುವದನ್ನು ಕಂಡು ದೇವಾಲಯಕ್ಕೆ ದ್ವಾರವನ್ನು ನೀಡಿರುವದಾಗಿ ತಿಳಿಸಿದರು. ದೇವರು ಎಲ್ಲರಿಗೂ ಆರೋಗ್ಯ ಸುಖ ಶಾಂತಿಯನ್ನು ನೀಡುವಂತಾಗಲಿ ಎಂದು ಆಶಿಸಿದರು.
ಸಿದ್ದಾಪುರ ಕರಡಿಗೋಡು ಚಾಮುಂಡೇಶ್ವರಿ ದೇವಾಲಯದ ಮುಖ್ಯಸ್ಥ ಕಂಬೀರಂಡ ನಂಜಪ್ಪ, ಅತಿಥಿಗಳಾಗಿ ಭಾಗವಹಿಸಿ ಯಾವದೇ ಕೆಲಸವನ್ನು ಮೋಸ - ವಂಚನೆಗಳಿಲ್ಲದೆ ಮನಃಸಾಕ್ಷಿಯಿಂದ ಮಾಡಿದರೆ ಕರ್ತವ್ಯದಲ್ಲಿ ದೇವರನ್ನು ಕಾಣಬಹುದು. ಬಸವೇಶ್ವರ ದೇವಾಲಯ ಮುಂದೆಯೂ ಹೆಚ್ಚು ಅಭಿವೃದ್ಧಿ ಹೊಂದುವಂತಾಗಲಿ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಜೆ.ಎನ್. ವಸಂತದೇವಿ ಮಾತನಾಡಿದರು. ಮಹಾದ್ವಾರದ ಶಿಲ್ಪಿ ಸಿ.ಹೆಚ್. ಸೋಮಶೇಖರ್ ಆಚಾರ್ಯ ಹಾಗೂ ಸತ್ಯ ನಾರಾಯಣ, ಪೂಜೆಗೆ ಕೆತ್ತನೆಯ ಪೀಠ ನೀಡಿದ ಲಕ್ಷ್ಮೀ ನಾರಾಯಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಬಸವೇಶ್ವರ ದೇವಾಲಯ ಸಮಿತಿ ಅಧ್ಯಕ್ಷ ಎನ್.ಗೋಪಾಲಕೃಷ್ಣ ಕಾಮತ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ದೇವಾಲಯ ಸಮಿತಿಯ ಬೆಂಗಳೂರಿನ ವಕೀಲ ಎನ್. ರವಿಂದ್ರ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಿಂದಲೂ ಭಕ್ತಾದಿಗಳು ಅಗಮಿಸಿದ್ದರು ದೇವಸ್ಥಾನ ಸಮಿತಿಯಿಂದ ಭಕ್ತಾದಿಗಳಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿಯ ಸದಸ್ಯರುಗಳು ಹಾಜರಿದ್ದರು.