ಗೋಣಿಕೊಪ್ಪ ವರದಿ, ಜು. 15: ಕಾವೇರಿ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಗೋಣಿಕೊಪ್ಪ ಕಾಲೇಜು ಅಭಿವೃದ್ಧಿ ಪಡಿಸುವ ಚಿಂತನೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕಂಪ್ಯೂಟರ್ ಕೊಠಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಯಿತು.
ಪೂಜಾ ಕಾರ್ಯಕ್ರಮದಲ್ಲಿ ಕಾವೇರಿ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಕಾವೇರಿ ಎಜುಕೇಷನ್ ಸೊಸೈಟಿ ಆಡಳಿತ ಮಂಡಳಿ, ಆಡಳಿತ ವರ್ಗ ಪಾಲ್ಗೊಂಡರು.
ಸಂಘದ ಉಪಾಧ್ಯಕ್ಷ ತಿರುನೆಲ್ಲಿಮಾಡ ಎಂ. ದೇವಯ್ಯ ಮಾತನಾಡಿ, ರೂ. 50 ಲಕ್ಷ ವೆಚ್ಚದಲ್ಲಿ ಕಂಪ್ಯೂಟರ್ ಕೋಣೆ ನಿರ್ಮಿಸಲಾಗುವದು. ಕಾಲೇಜು ಬಿಸಿಎ ವಿಭಾಗದ ವಿದ್ಯಾರ್ಥಿಗಳಿಗೆ ಇದರಿಂದ ಮತ್ತಷ್ಟು ಪ್ರಯೋಜನವಾಗಲಿದೆ. ಕಾಲೇಜು ಆಡಳಿತ ಮಂಡಳಿ ಮನವಿಯಂತೆ ಯೋಜನೆ ಅನುಷ್ಠಾನಗೊಳಿಸುತ್ತಿದ್ದೇವೆ ಎಂದರು.
ಈ ಸಂದರ್ಭ ಹಳೇ ವಿದ್ಯಾರ್ಥಿ ಸಂಘದ ಕುಸುಮಾಧರ್, ಕಾರ್ಯದರ್ಶಿ ವಾಣಿ ಚೆಂಗಪ್ಪ, ಖಜಾಂಚಿ ಮನು ನಂಜಪ್ಪ, ಸಂಚಾಲಕಿ ರಜನಿ, ಆಡಳಿತ ಮಂಡಳಿ ಸದಸ್ಯರಾದ ಸಿ. ಎಂ. ನಾಚಪ್ಪ, ಪಿ. ಬಿ. ಪೂಣಚ್ಚ, ಅನೀಶ್ ಮಾದಪ್ಪ, ಪುಚ್ಚಿಮಾಡ ಶುಭಾಶ್, ಕಾವೇರಿ ಎಜುಕೇಷನ್ ಸೊಸೈಟಿ ಅಧ್ಯಕ್ಷ ಡಾ. ಎ. ಸಿ. ಗಣಪತಿ, ಸಿಇಒ ಮೂಕಳಮಾಡ ಮೊಣ್ಣಪ್ಪ ಉಪಸ್ಥಿತರಿದ್ದರು.