ಚೆಟ್ಟಳ್ಳಿ, ಜು. 15: ಜಿಲ್ಲೆಯ ಸಿದ್ದಾಪುರ, ಮಾಲ್ದಾರೆ , ಬಾಡಗ ಬಾಣಂಗಾಲ ಮಟ್ಟಂ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿಮೀರಿದೆ.
ಬಾಡಗ ಬಾಣಂಗಾಲ ಮಟ್ಟಂ ಗ್ರಾಮದ ನಿವಾಸಿ ಎಂ.ಸಿ ಮೇದಪ್ಪ ಎಂಬವರಿಗೆ ಸೇರಿದ ತೋಟ ಹಾಗೂ ಮನೆಯಂಗಳಕ್ಕೆ ರಾತ್ರಿ ವೇಳೆ ಕಾಡಾನೆ ಹಿಂಡು ಧಾಳಿ ಮಾಡಿ ಬಾಳೆ ಹಾಗೂ ಕಾಫಿ ಗಿಡಗಳನ್ನು ನಾಶಪಡಿಸಿ, ತೆಂಗಿನಮರವನ್ನು ನೆಲಕ್ಕುರುಳಿಸಿದೆ.
ಸೂಕ್ತ ಪರಿಹಾರಕ್ಕಾಗಿ ಬೆಳೆಗಾರ ಎಂ.ಸಿ ಮೇದಪ್ಪ ಒತ್ತಾಯಿಸಿದ್ದಾರೆ.