ಶ್ರೀಮಂಗಲ, ಜು. 14 : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪೆÇನ್ನಂಪೇಟೆ ವಲಯ ಅಧ್ಯಕ್ಷರಾಗಿ ಕಾಳಿಮಾಡ ಎಂ. ಮೋಟಯ್ಯ, ಗೌರವ ಕಾರ್ಯದರ್ಶಿಯಾಗಿ ಜಮುನಾ, ಉಪಾಧ್ಯಕ್ಷರುಗಳಾಗಿ ಆಲೀರ ಸಾದಲಿ ಮತ್ತು ಹೇಮಾವತಿ, ಸಹಕಾರ್ಯದರ್ಶಿಯಾಗಿ ಮುತ್ತಮ್ಮ, ಖಜಾಂಚಿಯಾಗಿ ಆಲಿಮಾ ಅವರನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಸ್ಕೌಟ್ಸ್ ಆಯುಕ್ತ ಜಿಮ್ಮಿ ಸಿಕ್ವೇರ ಮಾತನಾಡಿ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಜಿಲ್ಲಾ ಪ್ರಧಾನ ಆಯುಕ್ತ ಕಂಬೀರಂಡ ಕಿಟ್ಟು ಕಾಳಪ್ಪ ಮಾತನಾಡಿ, ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮಾಹಿತಿ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಘಟಕಿ ದಮಯಂತಿ, ಸಹ ಸಂಘಟಕಿ ರಂಜನಿ, ವೀರಾಜಪೇಟೆ ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ನಳಿನಾಕ್ಷಿ ಹಾಜರಿದ್ದರು. ಗೌರವ ಕಾರ್ಯದರ್ಶಿ ಜಮುನಾ ಸ್ವಾಗತಿಸಿ ವಂದಿಸಿದರು.