ವೀರಾಜಪೇಟೆ, ಜು. 14: ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿಯ ಆವರಣದಲ್ಲಿ ನಡೆದ ಸರಳ ಸಮಾರಂಭದಲ್ಲಿ ಗ್ರಾಮ ಪಂಚಾಯಿತಿಯಲ್ಲಿ ಬಿಲ್ ಕಲೆಕ್ಟರ್ ಆಗಿ ಸುಧೀರ್ಘ 22 ವರ್ಷಗಳ ಸೇವೆಸಲ್ಲಿಸಿದ ಸಿ.ಆರ್. ರವಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಹಿಣಿ ಮತ್ತು ಸದಸ್ಯರಾದ ಪರಮೇಶ್ವರ, ಇಸ್ಮಾಯಿಲ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಸದಸ್ಯರಾದ ಅರುಣ್ ಕಾರ್ಯಪ್ಪ, ಕಿರಣ್ ಕುಮಾರ್, ರಾಧ, ಉಪಾಧ್ಯಕ್ಷೆ ಅನಿತಾ ಪಂಚಾಯಿತಿ ಪಿಡಿಓ ಪ್ರಮೋದ್ ನಿಯೋಜಿತ ಕಾರ್ಯದರ್ಶಿ ವಿಠಲ ಮತ್ತು ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಜರಿದ್ದರು.