ಕೂಡಿಗೆ, ಜು.14: ಕೂಡಿಗೆ ಗ್ರಾ.ಪಂ. ವ್ಯಾಪ್ತಿಯ ಹುದಗೂರಿನ ಪಶು ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಇಲ್ಲಿನ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಸುಮಾರು ಹದಿನೈದು ವರ್ಷಗಳ ಹಿಂದೆ ಪ್ರಾರಂಭಗೊಂಡಿರುವ ಪಶು ಆರೋಗ್ಯ ಘಟಕ ಕಿರಿದಾಗಿದ್ದು, ಇಲ್ಲಿನ ಕೊಠಡಿಗಳು ಶಿಥಿಲಾವಸ್ಥೆಯಲ್ಲಿದೆ. ಈ ವ್ಯಾಪ್ತಿಯ ಜನತೆ ಹೈನುಗಾರಿಕೆಗೆ ಒತ್ತು ಕೊಡುತ್ತಿರುವದರಿಂದ ಪಶು ವೈದ್ಯಾಲಯ ಅತ್ಯವಶ್ಯಕವಾಗಿದೆ. ಈ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ರೈತರು ಆಗ್ರಹಿಸಿದ್ದಾರೆ.

ಈ ಬಗ್ಗೆ ಕೂಡಿಗೆ ಗ್ರಾಮ ಪಂಚಾಯಿತಿ ಮಾಸಿಕ ಸಭೆಯಲ್ಲಿ ಪಶು ಆರೋಗ್ಯ ಕೇಂದ್ರವನ್ನು ಉತ್ತಮ ದರ್ಜೆಗೇರಿಸಲು ಆಯಾ ಗ್ರಾಮ ವ್ಯಾಪ್ತಿಯ ಸದಸ್ಯರುಗಳು ನಡಾವಳಿ ಮಾಡಿದ್ದು, ಸಂಬಂಧಪಟ್ಟ ಜಿಲ್ಲಾ ಕಾರ್ಯನಿರ್ವಹಣಾಧಿಕಾರಿಗೆ, ಪಶುಪಾಲನಾ ಇಲಾಖೆಯವರಿಗೆ ಹಾಗೂ ಕ್ಷೇತ್ರದ ಶಾಸಕರಿಗೆ ಮನವಿ ಸಲ್ಲಿಸಿದ್ದಾರೆ.