ಚೆಟ್ಟಳ್ಳಿ, ಜು. 13: ಜಿಲ್ಲೆಯ ಬಡ ಕುಟುಂಬಗಳಿಗೆ ಕೊಡಗು ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಸೌದಿ ನ್ಯಾಷನಲ್ ಸಮಿತಿ ಸಹಯೋಗದಲ್ಲಿ ಜಿಲ್ಲೆಯಲ್ಲಿ ಗುರುತಿಸಿರುವ ಬಡ ಕುಟುಂಬದವರಿಗೆ ಮೂರು ಮನೆಗಳನ್ನು ನಿರ್ಮಿಸಿ ಕೊಡಲಿದ್ದೇವೆ ಎಂದು ಜಿಲ್ಲಾ ಎಸ್.ವೈ.ಎಸ್ ಅಧ್ಯಕ್ಷ ಹಫೀಲ್ ಸಹದಿ ಹೇಳಿದರು.
ಸುನ್ನಿ ವೆಲ್ಫೇರ್ ಅಸೋಸಿ ಯೇಷನ್ ಕಿಸ್ವಾ ಮನೆಗಳನ್ನು ನಿರ್ಮಿಸಲು ಕೊಡಲು ನೀಡಿದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದರು.
ನಾಪೋಕ್ಲು ಸಮೀಪದ ಅಯ್ಯಂಗೇರಿಯಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಯ್ಯದ್ ಅಬ್ದುಲ್ ಖಾದರ್ ತಂಙಲ್ ಮಾತನಾಡಿ, ಮುಂದಿನ ದಿನಗಳಲ್ಲಿ ಎಸ್.ವೈ.ಎಸ್. ಸಹಯೋಗದಲ್ಲಿ ಇನ್ನಷ್ಟೂ ಹೆಚ್ಚು ಸಾಂತ್ವನ ಕಾರ್ಯಕ್ರಮಗಳನ್ನು ಜಿಲ್ಲೆಯಲ್ಲಿ ನಡೆಸಲಾಗುವದು ಎಂದು ತಿಳಿಸಿದರು. ಈ ಸಂದರ್ಭ ಸಿದ್ದೀಖ್ ಝುಹರಿ, ಎಸ್.ವೈ.ಎಸ್ ಜಿಲ್ಲಾ ಕಾರ್ಯದರ್ಶಿ ಮುಸ್ತಫಾ ಸಖಾಫಿ, ಅಬೂಬಕರ್ ಕಡಂಗ, ಸುನ್ನಿ ವೆಲ್ಫೇರ್ ಅಸೋಸಿಯೇಷನ್ ಸದಸ್ಯರಾದ ಅಬೂಬಕರ್ ರಿಯಾದ್, ಅಬ್ದುಲ್ ಸಲಾಂ, ಸೈಫುಲ್ಲಾ , ಆದಂ ಕಂಡಕರೆ, ಸಯ್ಯದ್ ರಿಯಾಲ್, ಅಬೂಬಕರ್ ಅಲ್ರಾಸ್ ಇದ್ದರು.