ವೀರಾಜಪೇಟೆ, ಜು. 13: ದೇಶವು ಉನ್ನತವಾದ ಭವ್ಯ ಪರಂಪರೆಯನ್ನು ಹೊಂದಿದೆ. ಗುರು ಮತ್ತು ಶಿಷ್ಯರ ಸಂಬಂಧ ದೈವದತ್ತವಾದ ಸಂಸ್ಕøತಿಯನ್ನು ಹೊಂದಿದ್ದು, ಇಂದಿಗೂ ಜೀವಂತವಾಗಿದೆ ಎಂದು ಗೊಣಿಕೊಪ್ಪ ವಿಧ್ಯಾನಿಕೇತನ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಹರೀಶ್ ತಮ್ನಾಕರ್ ಹೇಳಿದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ ನಗರ ಶಾಖೆಯ ವತಿಯಿಂದ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಗುರುಪೂಜಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೌದ್ಧಿಕ್ ನೀಡಲು ಆಗಮಿಸಿದ ಕರ್ನಾಟಕ ದಕ್ಷಿಣ ಪ್ರಾಂತ ಸಹ ಬೌದ್ಧಿಕ್ ಪ್ರಮುಖ್ ಕೃಷ್ಣಪ್ರಸಾದ್, ಸಂಘ ಯಾವದೇ ವ್ಯಕ್ತಿಯನ್ನು ಗುರುವೆಂದು ಅಂಗೀಕರಿಸದೆ ಭಗವಾತ್ ಧ್ವಜವನ್ನು ತನ್ನ ಗುರುವೆಂದು ಮಾನ್ಯ ಮಾಡಿದೆ. ಬುದ್ಧ ಪೂರ್ಣಿಮದಲ್ಲಿ ಉದಯವಾದ ದಿನವನ್ನು ಸಂಘವು ತನ್ನ ಪ್ರಮುಖ ಉತ್ಸವಗಳಲ್ಲೊಂದಾದ ಗುರುಪೂಜಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತದೆ ಎಂದರು. ವೇದಿಕೆಯಲ್ಲಿ ತಾಲೂಕು ಸಂಘ ಚಾಲಕ್ ಕುಟ್ಟಂಡ ಪ್ರಿನ್ಸ್ ಗಣಪತಿ ಉಪಸ್ಥಿತರಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘ ನಗರ ಶಾಖೆಯ ಸ್ವಯಂ ಸೇವಕರು, ಹಿಂದೂ ಬಾಂಧವರು ಹಾಜರಿದ್ದರು.