ಮಡಿಕೇರಿ, ಜು. 13: ಮಡಿಕೇರಿ ರೋಟರಿ ಇನ್ನರ್ ವ್ಹೀಲ್ ಕ್ಲಬ್‍ಗೆ ವಿವಿಧ ಕಾರ್ಯಕ್ಷೇತ್ರಗಳ ಸಾಧನೆಗಾಗಿ ಒಟ್ಟು ಆರು ಪ್ರಶಸ್ತಿಗಳು ಲಭ್ಯವಾಗಿವೆ.

ಪ್ರಕೃತಿ ವಿಕೋಪ ನಿರ್ವಹಣೆ, ಶಿಕ್ಷಣ, ಜಂಟಿ ಯೋಜನೆಗಳು, ಪರಿಸರ ಮತ್ತಿತರ ಯೋಜನೆಗಳಲ್ಲಿ ನಡೆಸಿದ ಚಟುವಟಿಕೆಗಳನ್ನು ಪರಿಗಣಿಸಿ ಈ ಪ್ರಶಸ್ತಿ ಲಭ್ಯವಾಗಿವೆ.

ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಇನ್ನರ್‍ವ್ಹೀಲ್ ಅಧ್ಯಕ್ಷೆ ಲತಾ ಚಂಗಪ್ಪ, ಕಾರ್ಯದರ್ಶಿ ರನ್ನುದೇವರಾಜ್ ಅವರುಗಳು ಪ್ರಶಸ್ತಿ ಸ್ವೀಕರಿಸಿದರು.

ಇನ್ನರ್ ವ್ಹೀಲ್‍ನ ಪ್ರಮುಖರಾದ ಮಮತಾ ಗುಪ್ತಾ, ಜಿಲ್ಲಾ ರಾಜ್ಯಪಾಲ ಡಾ. ಸಾರಿಕಾ ಪ್ರಸಾದ್, ಪೂರ್ಣಿಮಾ ರವಿ ಅವರುಗಳು ಇತ್ತೀಚೆಗೆ ಕಡೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರಧಾನ ಮಾಡಿದರು.