ಮೂರ್ನಾಡು, ಜು. 13: ಇಲ್ಲಿಗೆ ಸಮೀಪದ ಕಿಗ್ಗಾಲು ನಿವಾಸಿ ಕಿಗ್ಗಾಲು ಗಿರೀಶ್ ಗೆ ರಾಜ್ಯಮಟ್ಟದ ಸಾಹಿತ್ಯ ಚಿಗುರು ಬಳಗದ ವತಿಯಿಂದ ಬೆಳ್ಳಿಯ ಪದಕವನ್ನು ಪ್ರದಾನ ಮಾಡಲಾಗಿದೆ.

ಕಳೆದ ಒಂದು ವರ್ಷದಿಂದ ರಾಜ್ಯಮಟ್ಟದ ಉತ್ಕೃಷ್ಟ ಸಾಹಿತ್ಯ ಕೃಷಿಯನ್ನು ಸಾಹಿತ್ಯಚಿಗುರು ಬಳಗದಲ್ಲಿ ನಡೆಸಿರುವದನ್ನು ಗುರುತಿಸಿ ಕಿಗ್ಗಾಲು ಗಿರೀಶ್ ಅವರಿಗೆ ಪ್ರಥಮ ಬಹುಮಾನವಾಗಿ ಬೆಳ್ಳಿಯ ಪದಕವನ್ನು ನೀಡಿ ಗೌರವಿಸಲಾಗಿದೆ.