ಮಡಿಕೇರಿ, ಜು. 13 : ಮಡಿಕೇರಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ 2019- 22ನೇ ಸಾಲಿನ ನೂತನ ಆಡಳಿತ ಮಂಡಳಿಯನ್ನು ರಚಿಸಲಾಗಿದ್ದು, ಅಧ್ಯಕ್ಷರಾಗಿ ಕೆ.ಎಸ್.ಮುತ್ತಮ್ಮ, ಪ್ರಧಾನ ಕಾರ್ಯದರ್ಶಿಯಾಗಿ ಐ.ಎ.ಅಕ್ಕಮ್ಮ, ಉಪಾಧ್ಯಕ್ಷರಾಗಿ ಕೆ.ಯಶೋಧ, ಕಾರ್ಯದರ್ಶಿಯಾಗಿ ಒ.ಎನ್.ಸರಿತ ಹಾಗೂ ಕೋಶಾಧಿಕಾರಿಯಾಗಿ ಎಸ್.ಶೈಲಜ ಆಯ್ಕೆಯಾಗಿದ್ದಾರೆ.
ಕಾರ್ಯಕಾರಿ ಸಮಿತಿಗೆ ಜಿ.ಎಂ.ಕಾವೇರಮ್ಮ, ಟಿ.ಕೆ.ಕವಿತ, ಯು.ಎಸ್.ಸುಜಾತ, ಬಿ.ಎಸ್.ಶೋಭಾ, ಬಿ.ಎನ್.ಭವಾನಿ, ಒ.ಎನ್.ಸರಿತ, ಹೆಚ್.ಚಂದ್ರಾವತಿ, ಎ.ಎನ್.ಜ್ಯೋತಿ, ಬಿ.ಜಿ.ಪ್ರೇಮಾ, ಜಿ.ಎಸ್.ಮುತ್ತಮ್ಮ ಹಾಗೂ ರಾಧಾ ಅವರು ಆಯ್ಕೆಯಾದರು.
ಗೌರವ ಸಲಹೆಗಾರರನ್ನಾಗಿ ವಿ.ಹೆಚ್.ನಾಗರತ್ನ, ಜಿ.ಯು.ಪವಿತ್ರ, ಎ.ಜಿ. ತಾರಾಮಣಿ, ಮಾಲತಿ, ಸುಜಾತ, ದೇವಮ್ಮಾಜಿ ಮತ್ತು ವೀಣಾ ಕುಮಾರಿ ಅವರನ್ನು ನೇಮಿಸಲಾಯಿತು.
ಸಂಘದ ಮುಖಂಡ ಟಿ.ಪಿ.ರಮೇಶ್ ಸಂಘಟನೆಯನ್ನು ಬಲಗೊಳಿಸುವಂತೆ ಸಲಹೆ ನೀಡಿದರು. ಮಾಲಿನಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ನಿರ್ಗಮಿತ ಪ್ರಧಾನ ಕಾರ್ಯದರ್ಶಿ ಪವಿತ್ರ ಸ್ವಾಗತಿಸಿ, ನೂತನ ಪ್ರಧಾನ ಕಾರ್ಯದರ್ಶಿ ಅಕ್ಕಮ್ಮ ವಂದಿಸಿದರು.