ಮಡಿಕೇರಿ, ಜು. 13: ಕೇಂದ್ರ ಯುವ ಮತ್ತು ಕ್ರೀಡಾ ಸಚಿವಾಲಯದ ಅಡಿಯಲ್ಲಿ ಭಾರತ ಸರ್ಕಾರದ ಕೊಡಗು ಜಿಲ್ಲೆಯ ನೆಹರು ಯುವ ಕೇಂದ್ರದ ಯುವ ಸಂಯೋಜಕರಾಗಿ ಬಿ. ಆಲಿ ಸಬ್ರಿನ್ ಅವರನ್ನು ನೇಮಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯುವ ಸಬಲೀಕರಣ ಕಾರ್ಯಕ್ರಮಗಳನ್ನು ಜಾರಿಗೆ ತರುವದು ಮತ್ತು ಕೊಡಗು ಜಿಲ್ಲೆಯ ಯುವಕ - ಯುವತಿ ಮಂಡಳಿಗಳ ಚಟುವಟಿಕೆಗಳನ್ನು ಬಲಪಡಿಸುವದು ಇದರ ಉದ್ದೇಶವಾಗಿದೆ.
ಪ್ರತಿ ಪಂಚಾಯಿತಿಯಲ್ಲಿ ಯುವಕ- ಯುವತಿ ಮಂಡಳಿಗಳನ್ನು ರಚಿಸಿದ ನಂತರ ಅವರಿಗೆ ನಾಯಕತ್ವ ತರಬೇತಿ ನೀಡಲಾಗುವದು ಮತ್ತು ಮಂಡಳಗಳ ಮೂಲಕ ರಾಜ್ಯ-ಕೇಂದ್ರ ಯುವ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತರಲಾಗುವದು ಎಂದು ಜಿಲ್ಲಾ ಯುವ ಸಂಯೋಜಕರು ತಿಳಿಸಿದ್ದಾರೆ. 18 ರಿಂದ 26 ವರ್ಷದೊಳಗಿನ ಯುವಕ ಮತ್ತು ಯುವತಿಯರು ಯುವ ಮಂಡಳಿಗಳ ಸದಸ್ಯರಾಗಿ ಸೇರಬಹುದು. ಹೆಚ್ಚಿನ ವಿವರಗಳಿಗಾಗಿ 08272-225470 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.