ವೀರಾಜಪೇಟೆ, ಜು. 13: ಕಲಾ, ಸಾಹಿತ್ಯ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಚಿಂತನೆಗಳೊಂದಿಗೆ ಪ್ರತಿಭಾನ್ವಿತರನ್ನು ಮುಂದೆ ತರುವ ಪ್ರಯತ್ನಕ್ಕೆ ಕೊಡಗು ದಫ್ ಸಮಿತಿ ಅಸ್ತಿತ್ವಕ್ಕೆ ತರಲಾಗಿದೆ ಎಂದು ದಫ್‍ನ ಜಿಲ್ಲಾ ಸಮಿತಿಯ ಅಧ್ಯಕ್ಷ ಮಜೀದ್ ತಿಳಿಸಿದರು. ವೀರಾಜಪೇಟೆಯ ದಫ್ ಕಚೇರಿಯಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯಲ್ಲಿ ಮುಂದಿನ ಸಾಲಿನ ಗೌರವಾಧ್ಯಕ್ಷರಾಗಿ ಅಕ್ಕಳತಂಡ ಮೊಯ್ದು, ಕಾರ್ಯಾಧ್ಯಕ್ಷರಾಗಿ ಚೋಕಂಡಳ್ಳಿಯ ಮಜೀದ್, ಉಪಾಧ್ಯಕ್ಷರಾಗಿ ಚಿಟ್ಟಡೆಯ ಸಜೀರ್ ಫೈಝು ಪ್ರಧಾನ ಕಾರ್ಯದರ್ಶಿ ಯಾಗಿ ಶರೀಫ್, ಜಂಟಿ ಕಾರ್ಯದರ್ಶಿಯಾಗಿ ಶಫೀಕ್, ಖಜಾಂಚಿಯಾಗಿ ಬಶೀರ್ ಹಾಗೂ ಆಡಳಿತ ಮಂಡಳಿಯ ಸದಸ್ಯರುಗಳಾಗಿ ನಾಸೀರ್, ರಶೀದ್, ಹಮೀದ್, ಜುಬೇರ್, ಹನೀಫ್, ಕರೀಮ್, ಹನೀಫ್, ಅಬ್ಬಾಸ್ ಜೈನಿ ಹಾಗೂ ಮಾಧ್ಯಮ ಸಲಹೆಗಾರರಾಗಿ ಎಸ್.ಎಂ. ಮುಬಾರಕ್ ಆಯ್ಕೆಯಾಗಿದ್ದಾರೆ