ಗೋಣಿಕೊಪ್ಪ ವರದಿ, ಜು. 13: ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದಲ್ಲಿ ತಾ. 16 ರಂದು ಗುರುಪೂರ್ಣಿಮೆ ಆಚರಣೆ ನಡೆಯಲಿದೆ.
ಅಂದು ಬೆಳಗ್ಗೆ 8 ಗಂಟೆಗೆ ರಾಮಕೃಷ್ಣ ಪೂಜೆ ಮೂಲಕ ಆರಂಭಗೊಂಡು, ವಿಷ್ಣು ಸಹಸ್ರನಾಮ ಪಠಣ, ವೇಧಘೋಷ, ಗುರುಕೀರ್ತನಾ, ಗುರು ಮಹಿಮೆ ಪ್ರವಚನ, ಆರತಿ, ಪ್ರಸಾದ ವಿನಿಯೋಗ ನಡೆಯಲಿದೆ. ಸಂಜೆ 6.30ಕ್ಕೆ ಆರತಿ ಮತ್ತು ವಿಶೇಷ ಪೂಜೆ ನಡೆಯಲಿದೆ ಎಂದು ಪೊನ್ನಂಪೇಟೆ ರಾಮಕೃಷ್ಣ ಅಧ್ಯಕ್ಷ ಬೋಧಸ್ವರೂಪ ನಂದಾಜಿ ಮಹರಾಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.