ವೀರಾಜಪೇಟೆ. ಜು. 8: ವಿಕಲಚೇತನರಿಗೆ ಉದ್ಯೋಗ ಹಾಗೂ ತರಬೇತಿಗೆ ಆಯ್ಕೆ ಮಾಡುವ ಉದ್ದೇಶದಿಂದ ವೀರಾಜಪೇಟೆ ತಾಲೂಕು ಹೋಬಳಿವಾರು ಮಟ್ಟದಲ್ಲಿ ವಾಕ್ ದೋಷ ಮತ್ತು ಶ್ರವಣ ದೋಷವುಳ್ಳ ವಿಕಲಚೇತನರು, ದೈಹಿಕ ವಿಕಲಚೇತನರುಗಳಿಗಾಗಿ, 18 ರಿಂದ 35 ವರ್ಷ ವಯೋ ಮಿತಿಯವರಿಗೆ ತಾ. 10 ರಂದು ಬೆಳಿಗ್ಗೆ 10.30 ಗಂಟೆಯಿಂದ ವೀರಾಜಪೇಟೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎ.ಪಿ.ಡಿ ಸಂಸ್ಥೆಯ ಅಧಿಕಾರಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಆಯಿಷಾ ಮೋ, 9035320397 ಸಂಪರ್ಕಿಸಬಹುದಾಗಿದೆ.