ಮಡಿಕೇರಿ, ಜು. 8: ಸರ್ಕಾರದ ಆದೇಶದಂತೆ ಸರ್ಕಾರಿ ಕಚೇರಿಗಳು ಅಂಗಡಿ, ಹೊಟೇಲ್, ರೆಸಾರ್ಟ್, ಹೋಂಸ್ಟೇಗಳು ಮತ್ತು ವಿವಿಧ ವಾಣಿಜ್ಯ ಮಳಿಗೆಗಳ ಜಾಹೀರಾತುಗಳ ನಾಮ ಫಲಕ ಕಡ್ಡಾಯವಾಗಿ ಕನ್ನಡದಲ್ಲಿ ಇರಬೇಕಾಗಿರುವದರಿಂದ ಕಡಗದಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಗ್ರಾಮಗಳಾದ ಕಡಗದಾಳು ಮತ್ತು ಇಬ್ನಿವಳವಾಡಿ ಗ್ರಾಮದಲ್ಲಿರುವ ಎಲ್ಲಾ ವಾಣಿಜ್ಯ ಮಳಿಗೆಗಳು, ಹೋಂಸ್ಟೇ, ರೆಸಾರ್ಟ್, ಅಂಗಡಿ, ಹೊಟೇಲ್, ವಿವಿಧ ವಾಣಿಜ್ಯ ಕಂಪನಿಗಳ ಜಾಹೀರಾತುಗಳ ನಾಮ ಫಲಕಗಳಲ್ಲಿ ಕಡ್ಡಾಯವಾಗಿ ಶೇ 60 ಕನ್ನಡ ಮತ್ತು ಶೇ 40 ಇತರ ಭಾಷೆ ಸಿಮೀತವಾಗಿರಬೇಕೆಂದು ಕಡಗದಾಳು ಗ್ರಾ.ಪಂ. ಪ್ರಕಟಣೆಯಲ್ಲಿ ಸೂಚಿಸಿದೆ.