ಮಡಿಕೇರಿ, ಜು. 8: ಪ್ರಸಕ್ತ (2019-20) ಸಾಲಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸುವ ಡಿಪ್ಲೋಮಾ ಲ್ಯಾಟರಲ್ ಎಂಟ್ರಿ (ಇಂಜಿನಿಯರಿಂಗ್ ಕೋರ್ಸ್‍ಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಮಾತ್ರ) ಪಿ.ಜಿ. ಕೋರ್ಸ್‍ಗಳಾದ ಎಂ.ಬಿ.ಎ., ಎಂ.ಸಿ.ಎ., ಎಂ.ಟೆಕ್, ಎಂ.ಇ ಕೋರ್ಸ್‍ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ಮೂಲಕ ಆಯ್ಕೆಯಾಗಿ ಸಾಲ ಪಡೆಯ ಬಯಸುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಸಿ.ಇ.ಟಿ.ಗೆ ಪಾವತಿಸಬೇಕಾದ ಶುಲ್ಕವನ್ನು ಸಿ.ಇ.ಟಿ. ಯಿಂದ ಸೀಟು ಪಡೆಯುವ ಹಂತದಲ್ಲಿಯೇ ನಿಗಮದಿಂದ ಸಾಲ ಮಂಜೂರು ಮಾಡಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಶುಲ್ಕ ಹೊಂದಾಣಿಕೆ ಮಾಡಲಾಗುತ್ತದೆ. 2019-20ನೇ ಸಾಲಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ/ ಸಿ.ಇ.ಟಿ ಮೂಲಕ ಸೀಟು ಪಡೆದು ಡಿಪ್ಲೋಮಾ ಲ್ಯಾಟರಲ್ ಎಂಟ್ರಿ (ಇಂಜಿನಿಯರಿಂಗ್ ಕೋರ್ಸ್‍ಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳು ಮಾತ್ರ) ಪಿ.ಜಿ.ಕೋರ್ಸ್‍ಗಳಾದ ಎಂ.ಬಿ.ಎ., ಎಂ.ಸಿ.ಎ., ಎಂ.ಟೆಕ್, ಎಂ.ಇ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡಲು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಅರಿವು ಶೈಕ್ಷಣಿಕ ಸಾಲ ಯೋಜನೆಯಲ್ಲಿ ಸಾಲ ಪಡೆಯಬಯಸುವ 2018-19ನೇ ಸಾಲಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ/ ಸಿ.ಇ.ಟಿ ಮೂಲಕ ಸೀಟು ಪಡೆದು ವೃತ್ತಿಪರ ಕೋರ್ಸ್‍ಗಳಲ್ಲಿ ವ್ಯಾಸಂಗ ಮಾಡಲು ನಿಗಮದಿಂದ ಸಾಲ ಪಡೆಯ ಬಯಸುವ ಹಿಂದುಳಿದ ವರ್ಗಗಳ ಪ್ರ-1, ಪ್ರ-2ಎ, ಪ್ರ-3ಎ ಮತ್ತು ಪ್ರ-3ಬಿ ಗೆ ಸೇರಿದ್ದು, (ವಿಶ್ವಕರ್ಮ ಮತ್ತು ಉಪ ಜಾತಿಗಳನ್ನು ಹಾಗೂ ಅಲ್ಪಸಂಖ್ಯಾತರು ಮತ್ತು ಉಪಜಾತಿಗಳು, ಉಪ್ಪಾರ ಮತ್ತು ಉಪ ಜಾತಿಗಳು ಹಾಗೂ ಬೆಸ್ತ/ ಅಂಬಿಗ ಮತ್ತು ಅದರ ಉಪ ಜಾತಿಗಳನ್ನು ಹೊರತುಪಡಿಸಿ), ವಿದ್ಯಾರ್ಥಿ ಮತ್ತು ಕುಟುಂಬದ ವಾರ್ಷಿಕ ವರಮಾನ ರೂ. 3.50 ಲಕ್ಷಗಳ ಮಿತಿಯಲ್ಲಿರುವ ವಿದ್ಯಾರ್ಥಿಗಳಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಸ್ವೀಕೃತಗೊಂಡ ಅರ್ಜಿಗಳಲ್ಲಿ ಅನುದಾನ ಲಭ್ಯತೆ ಮತ್ತು ಪ್ರವರ್ಗವಾರು 70:30 ರ ಅನುಪಾತ ಹಾಗೂ ರ್ಯಾಂಕ್‍ವಾರು ಪರಿಗಣಿಸಿ ಆಯ್ಕೆ ಮಾಡಲಾಗುವದು. ಸಾಲ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವೆಬ್‍ಸೈಟ್ ತಿತಿತಿ.ಞಚಿಡಿಟಿಚಿಣಚಿಞಚಿ.gov.iಟಿ/ಜbಛಿಜಛಿ ರಲ್ಲಿ ಮೊಜಿಲ್ಲಾ ಪೈರ್‍ಪಾಕ್ಸ್ ವೆಬ್ ಬ್ರೌಸರ್ ನಲ್ಲಿ ಲಾಗಿನ್ ಆಗಿ ವೆಬ್‍ಸೈಟ್‍ನಲ್ಲಿ ಲಭ್ಯವಿರುವ Useಡಿಟಿಚಿme-ಜಛಿeಣ 2019 ಮತ್ತು Pಚಿssತಿಚಿಡಿಜ ಜಛಿeಣ @123 ನ್ನು ನಮೂದಿಸಿ ಅರ್ಜಿಯನ್ನು ಆನ್‍ಲೈನ್‍ಲ್ಲಿ ಭರ್ತಿ ಮಾಡುವದು ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಎಸ್‍ಎಸ್‍ಎಲ್‍ಸಿ. ಅಂಕಪಟ್ಟಿ, ವಿದ್ಯಾರ್ಥಿ ಮತ್ತು ಪೋಷಕರ ಭಾವಚಿತ್ರ, ಸಿ.ಇ.ಟಿ/ ನೀಟ್ ಪ್ರವೇಶ ಪರೀಕ್ಷೆ ಅಡ್ಮಿಷನ್ ಟಿಕೆಟ್, ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ ಈ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅರ್ಜಿಯೊಂದಿಗೆ ಆನ್‍ಲೈನ್‍ಲ್ಲಿ ಜುಲೈ, 20 ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ನಿಗಮದ ಜಿಲ್ಲಾ ವ್ಯವಸ್ಥಾಪಕರನ್ನು ಕಚೇರಿ ವೇಳೆಯಲ್ಲಿ ದೂರವಾಣಿ ಸಂಖ್ಯೆ: 08272-221656 ನ್ನು ಸಂಪರ್ಕಿಸಬಹುದು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ತಿಳಿಸಿದ್ದಾರೆ.

ಮಡಿಕೇರಿ : ಜಿಲ್ಲೆಯಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರಗಳನ್ನು ಬಲಪಡಿಸುವ ಸಲುವಾಗಿ ಒಬ್ಬರು ವಿಪತ್ತು ನಿರ್ವಹಣಾ ಪರಿಣಿತರನ್ನು ಮಾಸಿಕ ರೂ. 40 ಸಾವಿರ ಸಂಭಾವನೆಯೊಂದಿಗೆ ಗುತ್ತಿಗೆ ಆಧಾರದ ಮೇಲೆ ಒಂದು ವರ್ಷದ ಅವಧಿಗೆ ನೇಮಕ ಮಾಡಲು ಅರ್ಹ ಅಭ್ಯರ್ಥಿ ಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‍ಸೈಟ್ hಣಣಠಿ://ಏoಜಚಿgu.ಟಿiಛಿ.iಟಿ ನಲ್ಲಿ ಅಳವಡಿಸಲಾಗಿದೆ. ಅರ್ಜಿ ನಮೂನೆ ಮತ್ತು ಇತರ ಮಾಹಿತಿ ತಾ. 10 ರಂದು ಬೆಳಿಗ್ಗೆ 10 ಗಂಟೆಯಿಂದ ವೆಬ್‍ಸೈಟ್‍ನಲ್ಲಿ ಲಭ್ಯವಾಗುತ್ತದೆ. ಅರ್ಜಿಯನ್ನು ಖುದ್ದಾಗಿ ಅಥವಾ ಅಂಚೆ ಮೂಲಕ ತಾ. 17 ರ ಸಂಜೆ 5.30 ರೊಳಗೆ ಸಲ್ಲಿಸಬೇಕು. ವಯೋಮಿತಿ, ಅರ್ಜಿ ಸಲ್ಲಿಸುವ ವಿಧಾನ, ವಿದ್ಯಾರ್ಹತೆ ಮತ್ತಿತರ ವಿವರಗಳಿಗೆ hಣಣಠಿ://ಏoಜಚಿgu.ಟಿiಛಿ.iಟಿನ್ನು ಗಮನಿಸಬಹುದು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

ಸ್ಯಾನಿಟರಿ ನ್ಯಾಪ್ಕಿನ್ ತಯಾರಿಕಾ ಘಟಕ ಸ್ಥಾಪನೆಗೆ

ಗ್ರಾಮೀಣ ಹಾಗೂ ಪಟ್ಟಣದ ಮಹಿಳೆಯರಿಗೆ ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಸ್ಯಾನಿಟರಿ ನ್ಯಾಪ್ಕಿನ್ ದೊರಕಿಸಲು ಕೈಮಗ್ಗ ಮತ್ತು ಜವಳಿ ಇಲಾಖೆಯು ಪ್ರತಿ ಜಿಲ್ಲೆಯಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ತಯಾರಿಕಾ ಘಟಕ ಆರಂಭಿಸಲು ಮುಂದಾಗಿದೆ. ಮಹಿಳೆಯರನ್ನು ಉದ್ಯಮಿಗಳನ್ನಾಗಿಸುವ ಜೊತೆಗೆ ಸ್ವಚ್ಛ ಭಾರತ ಅಭಿಯಾನಕ್ಕೆ ಕೊಡುಗೆ ನೀಡುವ ಉದ್ದೇಶದೊಂದಿಗೆ ಮಹಿಳಾ ಸ್ನೇಹಿ ಕಾರ್ಯಕ್ರಮವನ್ನು ರೂಪಿಸಿದೆ. ಆಯ್ಕೆಯಾಗುವ ಫಲಾನುಭವಿಗಳಿಗೆ ತರಬೇತಿ ನೀಡಲಾಗುವದು. ಘಟಕಕ್ಕೆ ಬೇಕಿರುವ ಯಂತ್ರೋಪಕರಣಗಳನ್ನು ಪೂರೈಸುವ ಕಂಪೆನಿಗಳೊಂದಿಗೆ ಮಾತುಕತೆ ನಡೆಸಿದ್ದು, ಇದಕ್ಕೆ ಬೇಕಿರುವ ಕಚ್ಚಾವಸ್ತು ಪೂರೈಕೆ ಸೇರಿದಂತೆ ಎಲ್ಲಾ ರೀತಿಯ ಸಹಕಾರವನ್ನು ಇಲಾಖೆ ನೀಡಲಿದೆ. ಫಲಾನುಭವಿಗಳು ಬ್ಯಾಂಕ್ ಅಥವಾ ಕೆಎಸ್‍ಎಫ್‍ಸಿ ಮೂಲಕ ಸಾಲ ಪಡೆಯಬೇಕು. ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆ ಅಡಿಯಲ್ಲಿ ಬಂಡವಾಳ ಸಹಾಯಧನ ಶೇ. 75, ಬ್ಯಾಂಕಿನ ಸಾಲಕ್ಕೆ ಬಡ್ಡಿ ಸಹಾಯಧನ ಶೇ. 15, ಒಟ್ಟು ಸಹಾಯಧನ ಶೇ. 90ರಷ್ಟು ಸರ್ಕಾರದ ಸಹಾಯಧನ ಯೋಜನೆಯ ಪ್ರಗತಿಯನ್ನು ಆಧರಿಸಿ ನಾಲ್ಕು ಕಂತುಗಳಲ್ಲಿ ಬಿಡುಗಡೆ ಮಾಡಲಾಗುವದು. ವಿವರಗಳಿಗೆ ಸಹಾಯಕ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, ಕೊಹಿನೂರು ರಸ್ತೆ, ಮಡಿಕೇರಿ, ದೂರವಾಣಿ ಸಂಖ್ಯೆ: 08272 -220365 ನ್ನು ಸಂಪರ್ಕಿಸಬಹುದು.