ವೀರಾಜಪೇಟೆ, ಜು. 8: ವೀರಾಜಪೇಟೆ ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ತಾ. 29ರಂದು ಅರಮೇರಿ ಕಳಂಚೇರಿ ಮಠದ ಲಿಂಗರಾಜೇಂದ್ರ ಸಭಾಂಗಣ ದಲ್ಲಿ ನಡೆಸಲು ನಿರ್ಧರಿಸಲಾಗಿದೆ. ಇತ್ತೀಚೆಗೆ ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಸಭೆಯಲ್ಲಿ ಈ ದಿನಾಂಕವನ್ನು ಅಂತಿಮಗೊಳಿಸ ಲಾಗಿದೆ. ಈ ಹಿನೆÀ್ನಲೆಯಲ್ಲಿ ತಾ. 12ರಂದು ಮಧ್ಯಾಹ್ನ 2 ಗಂಟೆಗೆ ವೀರಾಜಪೇಟೆ ಪ.ಪಂ.ಯ ಪುರಭವನದಲ್ಲಿ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರ ಸಮ್ಮುಖದಲ್ಲಿ ವೀರಾಜಪೇಟೆ ತಾಲೂಕು ಕ.ಸಾ.ಪ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಯಲ್ಲಿ ಶಾಸಕರ ನೇತೃತ್ವದ ಸ್ವಾಗತ ಸಮಿತಿಯ ಹಾಗೂ ಇತರ ಸಮಿತಿಗಳ ರಚನೆ ಮಾಡಲಾಗುವದು.
ತಾ.29 ರಂದು ನಡೆಯುವ ವೀರಾಜಪೇಟೆ ತಾಲೂಕು 8ನೇ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ, ಗೀತಗಾಯನ ಹಾಗೂ ಸಾಂಸ್ಕøತಿಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರು/ಆಸಕ್ತ ತಂಡ ತಾ.15ರ ಒಳಗಾಗಿ ಅಧ್ಯಕ್ಷರು, ವೀರಾಜಪೇಟೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಮೂರ್ನಾಡು ರಸ್ತೆ, ವೀರಾಜಪೇಟೆ ಈ ವಿಳಾಸದಲ್ಲಿ ಹೆಸರು ನೋಂದಾ ಯಿಸಬಹುದಾಗಿದೆ ಎಂದು ಸಹ ಕಾರ್ಯದರ್ಶಿ ರಜಿತಾ ಕಾರ್ಯಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.