ಕುಶಾಲನಗರ, ಜು. 8: ಕಾವೇರಿ ನದಿಗೆ ಹಾರಿದ ವೃದ್ದೆಯೊಬ್ಬಳನ್ನು ಸ್ಥಳೀಯರು ನೀರಿನಿಂದ ಮೇಲೆತ್ತಿ ರಕ್ಷಿಸಿದ ಘಟನೆಯೊಂದು ಕುಶಾಲನಗರ ಸಮೀಪದ ಕೊಪ್ಪ ಕಾವೇರಿ ಸೇತುವೆ ಬಳಿ ನಡೆದಿದೆ.
ಪಿರಿಯಾಪಟ್ಟಣದ ಅಂದಾಜು 65 ವರ್ಷ ಪ್ರಾಯದ ವೃದ್ದೆಯೊಬ್ಬಳು ಬೆಳಗಿನ ಜಾವ 6 ಗಂಟೆಗೆ ಬಸ್‍ನಿಂದ ಇಳಿದು ನೇರವಾಗಿ ತುಂಬಿ ಹರಿಯುತ್ತಿರುವ ಕಾವೇರಿಗೆ ಹಾರಿದ ದೃಶ್ಯ ಕಂಡು ಸ್ಥಳದಲ್ಲಿದ್ದ ಆವರ್ತಿ ಗ್ರಾಮದ ಯುವಕನೊಬ್ಬ ಮತ್ತು ಬಟ್ಟೆ ಒಗೆಯಲು ಬಂದ ಮಹಿಳೆಯರು ಸೇರಿ ರಕ್ಷಿಸಿದ್ದಾರೆ.
ತಾನು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದು ತನ್ನ ಮನೆಗೆ ಹೊರೆಯಾಗಿದ್ದೇನೆ ಎಂದು ಅಳಲು ತೋಡಿಕೊಂಡ ಮಹಿಳೆಯನ್ನು ನಂತರ ಮನೆಯಿಂದ ಮಾಹಿತಿ ದೊರೆತ ವೃದ್ದೆಯ ಕುಟುಂಬ ಸದಸ್ಯರು ಮನೆಗೆ ಕರೆದುಕೊಂಡು ಹೋಗುವಲ್ಲಿ ಯಶಸ್ವಿಯಾಗಿದ್ದಾರೆ.