ಮಡಿಕೇರಿ, ಜು. 7: ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮದಡಿ ಪ್ರಸಕ್ತ ಸಾಲಿಗೆ ಸೀವಿಂಗ್ ಮಷಿನ್ ಆಪರೇಟರ್ (ಯಾಂತ್ರೀಕೃತ ಹೊಲಿಗೆ ತರಬೇತಿ) ಹಾಗೂ ಕೈಮಗ್ಗ/ ವಿದ್ಯುತ್ ಮಗ್ಗ ತರಬೇತಿ ಹಮ್ಮಿಕೊಳ್ಳಲಾಗಿದೆ. ಸೀವಿಂಗ್ ಮಷಿನ್ ಆಪರೇಟರ್/ ಕೈಮಗ್ಗ/ ವಿದ್ಯುತ್ ಮಗ್ಗ ತರಬೇತಿಯನ್ನು ಇಲಾಖೆಯಿಂದ ಅನುಮೋದನೆಗೊಂಡಿರುವ ತರಬೇತಿ ಕೇಂದ್ರಗಳಲ್ಲಿ ಪಡೆಯಬಹುದಾಗಿದೆ. ತರಬೇತಿ ಪಡೆಯಲಿಚ್ಚಿಸುವರಿಂದ ಅರ್ಜಿ ಆಹ್ವಾನಿಸಲಾಗಿದೆ.

ತರಬೇತಿ ಪಡೆಯಲಿಚ್ಚಿಸುವ ಅಭ್ಯರ್ಥಿಗಳು ವ್ಯವಸ್ಥಾಪಕರು, ಮಾಸ್ತಿ ಸಿದ್ಧ ಉಡುಪು ತರಬೇತಿ ಮತ್ತು ವಿನ್ಯಾಸ ಕೇಂದ್ರ, ಓಲ್ಡ್ ಪೆನ್‍ಷನ್ ಲೈನ್ ರಸ್ತೆ, ಮಡಿಕೇರಿ. 9986912896, ವ್ಯವಸ್ಥಾಪಕರು, ಸ್ಪೂರ್ತಿ ಸಿದ್ಧ ಉಡುಪು ತರಬೇತಿ ಮತ್ತು ವಿನ್ಯಾಸ ಕೇಂದ್ರ, ಗುಮ್ಮನಕೊಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ ಹಿಂಭಾಗ, ಬಸವೇಶ್ವರ ಬಡಾವಣೆ, ಕೂಡಿಗೆ ರಸ್ತೆ, ಕುಶಾಲನಗರ-9481063079, ವ್ಯವಸ್ಥಾಪಕರು, ಶ್ರೀ ಶ್ರದ್ಧಾ ಸಿದ್ಧ ಉಡುಪು ತರಬೇತಿ ಮತ್ತು ವಿನ್ಯಾಸ ಕೇಂದ್ರ, ಕಾವೇರಿ ಕಲ್ಯಾಣ ಮಂಟಪದ ಹತ್ತಿರ, ಸಿದ್ದಾಪುರ ರಸ್ತೆ, ತೆಲುಗರ ಸ್ಟ್ರೀಟ್, ವೀರಾಜಪೇಟೆ-9632420004, ವ್ಯವಸ್ಥಾಪಕರು, ಶ್ರೀ. ವೆಂಕಟೇಶ್ವರ ಸಿದ್ಧ ಉಡುಪು ತರಬೇತಿ ಮತ್ತು ವಿನ್ಯಾಸ ಕೇಂದ್ರ, ಶಿವಪ್ರಕಾಶ್ ಆಚಾರ್ಯ, ಬಸವೇಶ್ವರ ಕಾಂಪ್ಲೆಕ್ಸ್, ಗುಡುಗಳಲೆ, ಶನಿವಾರಸಂತೆ-7090790710, ವ್ಯವಸ್ಥಾಪಕರು, ಅಮೃತ್ ಕ್ರಿಯೇಷನ್ಸ್ ಸಿದ್ಧ ಉಡುಪು ತರಬೇತಿ ಮತ್ತು ವಿನ್ಯಾಸ ಕೇಂದ್ರ, ಪೂಜಾ ಕಾಂಪ್ಲೆಕ್ಸ್, ಬೈಪಾಸ್ ರಸ್ತೆ, ಗೋಣಿಕೊಪ್ಪ.- 9448849579, ವ್ಯವಸ್ಥಾಪಕರು, ಕಾವೇರಿ ಸಿದ್ಧ ಉಡುಪು ತರಬೇತಿ ಮತ್ತು ವಿನ್ಯಾಸ ಕೇಂದ್ರ, ಜೂನಿಯರ್ ಕಾಲೇಜು ರಸ್ತೆ, ಮೂರ್ನಾಡು-9964842180, ವ್ಯವಸ್ಥಾಪಕರು, ಶ್ರೀನಿಧಿ ಸಿದ್ಧ ಉಡುಪು ತರಬೇತಿ ಮತ್ತು ವಿನ್ಯಾಸ ಕೇಂದ್ರ, ಕಾರ್ಪೋರೇಷನ್ ಬ್ಯಾಂಕ್ ಎದುರು, ಶನಿವಾರಸಂತೆ ರಸ್ತೆ, ಸೋಮವಾರಪೇಟೆ-9844956546, ಅಧ್ಯಕ್ಷರು-ಕಾರ್ಯದರ್ಶಿ, ಕೈಮಗ್ಗ ನೇಕಾರರ ಹಾಗೂ ಸಿದ್ಧ ಉಡುಪು ಉತ್ಪಾದನೆ ಮತ್ತು ಮಾರಾಟ ಸಹಕಾರ ಸಂಘ ನಿಯಮಿತ, ವೀರಭೂಮಿ ಸರ್ಕಲ್, ಗುಮ್ಮನಕೊಲ್ಲಿ, ಕುಶಾಲನಗರ 7090790710, ವ್ಯವಸ್ಥಾಪಕರು, ಅಕ್ಷತ್ ವಿದ್ಯುತ್ ಮಗ್ಗ ತರಬೇತಿ ಮತ್ತು ವಿನ್ಯಾಸ ಕೇಂದ್ರ, ಕೂರ್ಗ್ ಸ್ಪೋಟ್ರ್ಸ್ ಕ್ಲಬ್ ಹಿಂಭಾಗ, ಮತ್ತೂರು ರಸ್ತೆ, ಪೊನ್ನಂಪೇಟೆ-9448849579. ಈ ಕಚೇರಿಗೆ ಹಾಗೂ ತರಬೇತಿ ಸಂಸ್ಥೆಗಳಿಗೆ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಸೀವಿಂಗ್ ಮೆಷಿನ್ ಆಪರೇಟರ್(ಎಸ್‍ಎಂಒ) ಮತ್ತು ಕೈಮಗ್ಗ/ ವಿದ್ಯುತ್ ಮಗ್ಗ ತರಬೇತಿಗಾಗಿ ಅರ್ಜಿ ಸಲ್ಲಿಸಲು ಮುಖ್ಯಮಂತ್ರಿಗಳ ಕೌಶಲ್ಯ ಕರ್ನಾಟಕ ಯೋಜನೆಯಡಿ ವಾಹಿನಿ-2 ರಡಿ ಕೈಮಗ್ಗ ಮತ್ತು ಜವಳಿ ಇಲಾಖೆ ಸೇರಿಸಲಾಗಿದ್ದು, ಎಲ್ಲಾ ಅನುಷ್ಠಾನಾಧಿಕಾರಿಗಳು ತಿತಿತಿ.ಞಚಿushಚಿಟಞಚಿಡಿ.ಛಿom ನಲ್ಲಿ ನೋಂದಣಿ ಮಾಡಿಕೊಂಡ ಅಭ್ಯರ್ಥಿಗಳಿಗೆ ಮಾತ್ರ ತರಬೇತಿ ನೀಡಲಾಗುವದು. ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ದ್ವಿಪ್ರತಿಯಲ್ಲಿ ಸಲ್ಲಿಸಬೇಕು. ಸೀವಿಂಗ್ ಮಷಿನ್ ಆಪರೇಟರ್ (ಎಸ್‍ಎಂಒ) ಮತ್ತು ಕೈಮಗ್ಗ ತರಬೇತಿಯು 45 ದಿನಗಳ ಅವಧಿಯಾಗಿರುತ್ತದೆ. ತರಬೇತಿ ಪಡೆಯಲು ಅಭ್ಯರ್ಥಿಯು ಕನಿಷ್ಟ 5ನೇ ತರಗತಿ ಉತ್ತೀರ್ಣರಾಗಿರಬೇಕು. ಅಭ್ಯರ್ಥಿಯ ವಯಸ್ಸು 18 ರಿಂದ 35 ವರ್ಷದ ಒಳಪಟ್ಟಿದ್ದು, ಸೂಕ್ತ ದಾಖಲೆಗಳನ್ನು ಒದಗಿಸಬೇಕು. ಅಭ್ಯರ್ಥಿಗಳು ಆಧಾರ್ ಕಾರ್ಡ್‍ನ್ನು ಕಡ್ಡಾಯವಾಗಿ ಸಲ್ಲಿಸುವದು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಇದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಕಡ್ಡಾಯವಾಗಿ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಪತ್ರ ನೀಡತಕ್ಕದ್ದು.

ಹಿಂದುಳಿದ ವರ್ಗ ಹಾಗೂ ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು ಕಡ್ಡಾಯವಾಗಿ ಆದಾಯ ದೃಢೀಕರಣ ಪತ್ರ ನೀಡತಕ್ಕದ್ದು. ತರಬೇತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಪೂರ್ಣವಾದ ನಂತರ ತರಬೇತಿ ಅವಧಿಯಲ್ಲಿ ಶೇ. 80 ರಷ್ಟು ಹಾಜರಾತಿಯಾದರೆ ಮಾತ್ರ ಶಿಷ್ಯವೇತನ ರೂ. 3500 ಹಾಗೂ ತರಬೇತಿ ಪ್ರಮಾಣ ಪತ್ರ ನೀಡಲಾಗುವದು. ತರಬೇತಿ ಪಡೆದ ಅಭ್ಯರ್ಥಿಗಳಿಗೆ ಶೇ. 100 ರಷ್ಟು ಸಿದ್ಧ ಉಡುಪು ತಯಾರಿಕಾ ಘಟಕ/ ಕೈಮಗ್ಗ ಉತ್ಪನ್ನಗಳ ಘಟಕಗಳಲ್ಲಿ ಉದ್ಯೋಗ ಕಲ್ಪಿಸಿಕೊಡಲಾಗುವದು.

ಅರ್ಜಿಯನ್ನು ಕಚೇರಿ ವೇಳೆಯಲ್ಲಿ ಸಹಾಯಕ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಕಟ್ಟಡ, ಕೊಹಿನೂರ್ ರಸ್ತೆ, ಮಡಿಕೇರಿ, ದೂರವಾಣಿ ಸಂಖ್ಯೆ: 08272-220365 ರವರ ಕಚೇರಿಯಲ್ಲಿ ಅಥವಾ ತರಬೇತಿ ಸಂಸ್ಥೆಗಳಲ್ಲಿ ಪಡೆಯಬಹುದು, ಅರ್ಜಿ ಸಲ್ಲಿಸಲು ತಾ. 31 ಕೊನೆಯ ದಿನವಾಗಿದೆ ಎಂದು ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಸ್ವಾಮಿ ತಿಳಿಸಿದ್ದಾರೆ.