ಸುಂಟಿಕೊಪ್ಪ, ಜು. 7: ಸಮೀಪದ ಬಾಳೆ ಕಾಡು ತಿರುವಿನಲ್ಲಿ ಗೂಡ್ಸ್ ಆಟೋವೊಂದು ಮಗುಚಿ ಮೂವರಿಗೆ ಗಾಯವಾದ ಘಟಣೆ ನಡೆದಿದೆ. ಹುಣಸೂರಿನಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ (ಕೆಎ.45-2732) ಗೂಡ್ಸ್ ಆಟೋವೊಂದು ಬಾಳೆ ಕಾಡು ತಿರುವಿನಲ್ಲಿ ಮಗುಚಿದ ಪರಿಣಾಮ ಆಟೋ ಚಾಲಕ ಸೇರಿದಂತೆ ಮೂªರು ಆಟೋರಿಕ್ಷಾದ ಅಡಿಗೆ ಸಿಲುಕಿದ್ದರು. ಅದೇ ದಾರಿಯಲ್ಲಿ ಆಟೋ ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದ ಸುಂಟಿಕೊಪ್ಪ ಆಟೋ ಚಾಲಕರ ಸಂಘದ ಮಾಜಿ ಅಧ್ಯಕ್ಷ ಬಿ.ಆರ್. ಸಂತೋಷ್ (ದಿನು) ಆಟೋವನ್ನು ಮೇಲಕ್ಕೆತ್ತಿ ಗಾಯಾಳುಗಳನ್ನು ರಕ್ಷಿಸಿ ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ಮಾನವಿಯತೆ ಮೆರೆದರು. ಸುಂಟಿಕೊಪ್ಪ ಪೊಲೀಸರು ಆಟೋವನ್ನು ವಶಕ್ಕೆ ಪಡೆದು ಮುಂದಿನ ಕ್ರಮ ಕೈಗೊಂಡಿದ್ದಾರೆ.